ನವದೆಹಲಿ, ಮಾ 21 (DaijiworldNews/MS): "ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯ ಇಂದಿನ ಭಾರತೀಯ ರಾಜಕೀಯದ ಮೀರ್ ಜಾಫರ್ " ಎಂದು ಬಿಜೆಪಿ ಟೀಕಿಸಿದೆ.
"ರಾಹುಲ್ ಗಾಂಧಿ ಇಂದಿನ ರಾಜಕೀಯದ ಮೀರ್ ಜಾಫರ್ ಆಗಿದ್ದಾರೆ. ಮೀರ್ ಜಾಫರ್ ನವಾಬ್ ನಾಗಲು ಏನು ಮಾಡಿದ್ದನೋ ಮತ್ತು ರಾಹುಲ್ ಗಾಂಧಿ ಲಂಡನ್ನಲ್ಲಿ ಮಾಡಿದ್ದೂ ಒಂದೇ ಆಗಿರುತ್ತದೆ. ರಾಜಕುಮಾರ ವಿದೇಶಿ ಶಕ್ತಿಗಳ ಸಹಾಯದಿಂದ ನವಾಬ್ ನಾಗಲು ಬಯಸುತ್ತಾರೆ" ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಅವರು ಮಾಧ್ಯಮಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದ್ದಾರೆ.
"ರಾಹುಲ್ ಅವರು ಸಂಸತ್ನಲ್ಲಿ ಕ್ಷಮೆ ಯಾಚಿಸಬೇಕು. ಅವರಿಗೆ ಅದು ಬಿಟ್ಟು ಬೇರೆ ದಾರಿ ಇಲ್ಲ. ವಿದೇಶದಲ್ಲಿ ಭಾರತವನ್ನು ಅವಮಾನಿಸಿದ್ದಾರೆ. ಅಲ್ಲದೆ, ಭಾರತದ ಆಂತರಿಕ ವ್ಯವಹಾರಗಳಲ್ಲಿ ವಿದೇಶಿ ಶಕ್ತಿಗಳು ಮಧ್ಯಪ್ರವೇಶ ಮಾಡುವಂತೆ ಬೇಡಿಕೆ ಇರಿಸಿದ್ದಾರೆ. ರಾಹುಲ್ ಗಾಂಧಿ ಅವರು ಸಂಸತ್ ಕಲಾಪಗಳಲ್ಲಿ ಭಾಗವಹಿಸುವುದು ತೀರಾ ಕಡಿಮೆ. ಆದರೂ ತಮಗೆ ಮಾತನಾಡಲು ಅವಕಾಶ ನೀಡುವುದಿಲ್ಲ ಎಂದೂ ಆರೋಪಿಸುತ್ತಾರೆ" ಎಂಬುದಾಗಿ ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಅವರು ಕಿಡಿಕಾರಿದ್ದಾರೆ.
ರಾಹುಲ್ ಗಾಂಧಿ ಅವರು ಪ್ರಸಕ್ತ ದಿನದ ಭಾರತೀಯ ರಾಜಕಾರಣದ ಮಿರ್ ಜಾಫರ್ ಎಂದು ಹೇಳಿದರೆ ತಪ್ಪಾಗದು" ಎಂದು ಪಾತ್ರಾ ಟೀಕಿಸಿದ್ದಾರೆ.
ರಾಹುಲ್ ಅವರು ದೇಶವನ್ನು ಅವಮಾನಿಸಿ ವಿದೇಶಿ ಹಸ್ತಕ್ಷೇಪವನ್ನು ಬಯಸಿರುವುದು ಸಮಸ್ಯೆಯಲ್ಲ, ಇದೊಂದು ವ್ಯವಸ್ಥಿತ ಪಿತೂರಿ ಎಂದು ನಾವು ನಂಬುತ್ತೇವೆ ಎಂದು ಪತ್ರಾ ದೂರಿದ್ದಾರೆ.