ನವದೆಹಲಿ, ಮಾ 21 (DaijiworldNews/HR): ತಾವು ಮಾಡಿರುವ ತಪ್ಪುಗಳನ್ನು ಮರೆಮಾಚುವುದಕ್ಕಾಗಿ ಮತ್ತು ತಮ್ಮ ಕಳಪೆ ಪ್ರಚಾರಕ್ಕಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸರ್ಕಾರದ ಬಜೆಟ್ನಲ್ಲಿ ಗದ್ದಲವನ್ನು ಸೃಷ್ಟಿಸಿದ್ದಾರೆ ಎಂದು ದೆಹಲಿ ಬಿಜೆಪಿ ಆರೋಪಿಸಿದೆ.
ಈ ಕುರಿತು ಮಾತನಾಡಿರುವ ದೆಹಲಿ ಬಿಜೆಪಿ ಕಾರ್ಯಾಧ್ಯಕ್ಷ ವೀರೇಂದ್ರ ಸಚ್ದೇವ್, ನಗರಾಡಳಿತ ಎದುರಿಸುತ್ತಿರುವ ಭ್ರಷ್ಟಾಚಾರದ ಆರೋಪದಿಂದ ಗಮನವನ್ನು ಬೇರೆಡೆ ಸೆಳೆಯಲು ಕೇಂದ್ರ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ಕೇಜ್ರಿವಾಲ್ ಆರೋಪ ಮಾಡುತ್ತಿದ್ದಾರೆ ಎಂದರು.
ಇನ್ನು ಬಜೆಟ್ ನಿಲ್ಲಿಸಲು ಕೇಂದ್ರ ಕಾರಣ ಎಂದು ಆರೋಪ ಮಾಡುವ ಬದಲು ಮೂರು ದಿನಗಳಿಂದ ಗೃಹಸಚಿವಾಲಯ ಕೇಳಿರುವ ಮಾಹಿತಿಗೆ ದೆಹಲಿ ಸರ್ಕಾರ ಸ್ಪಷ್ಟೀಕರಣ ನೀಡಲಿ ಎಂದು ಸಚ್ದೇವ್ ಆಗ್ರಹಿಸಿದ್ದಾರೆ.