ಪಂಜಾಬ್, ಮಾ 21 (DaijiworldNews/MS): ಸಿಖ್ ಮೂಲಭೂತವಾದಿ ಧರ್ಮ ಪ್ರಚಾರಕ , ಖಲಿಸ್ಥಾನ ಪರ ಬೆಂಬಲಿಗ ಅಮೃತ್ಪಾಲ್ ಸಿಂಗ್ ನನ್ನು ಬಂಧಿಸುವ ಪಂಜಾಬ್ ಪೊಲೀಸರ ಮೂರನೇ ದಿನದ ಪ್ರಯತ್ನವೂ ಮುಂದುವರಿದಿದೆ. ಅಮೃತ್ಪಾಲ್ ಸಿಂಗ್ ವಿಚಾರವಾಗಿ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಅಮೃತಪಾಲ್ ಸಿಂಗ್ ಬಗ್ಗೆ ಮೌನ ಮುರಿದಿದ್ದಾರೆ.
"ಕಳೆದ ಕೆಲವು ದಿನಗಳಿಂದ ಕೆಲವು ಶಕ್ತಿಗಳು, ವಿದೇಶಿ ಶಕ್ತಿಗಳ ಸಹಾಯದಿಂದ ಪಂಜಾಬ್ನ ಪರಿಸರವನ್ನು ಹಾಳುಮಾಡಲು ಪ್ರಯತ್ನಿಸುತ್ತಿವೆ. ದ್ವೇಷಪೂರಿತ ಭಾಷಣಗಳನ್ನು ಹರಡಲಾಗುತ್ತಿದೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಇವರನ್ನೆಲ್ಲಾ ಬಂಧಿಸಲಾಗಿದ್ದು ಕಠಿಣ ಶಿಕ್ಷೆಯನ್ನು ನೀಡಲಾಗುವುದು ಎಂದು ಮಾನ್ ಹೇಳಿದ್ದಾರೆ
"ಪಂಜಾಬಿಗಳು ಸ್ನೇಹ ಮತ್ತು ಶಾಂತಿಗಾಗಿ ಹೆಸರುವಾಸಿಯಾಗಿದ್ದಾರೆ, ಆದರೆ ಪ್ರಚೋದಿಸಿದರೆ, ನಾವು ಸೂಕ್ತ ಉತ್ತರ ನೀಡುತ್ತೇವೆ" ಎಂದು ಎಚ್ಚರಿಸಿದ್ದಾರೆ.
ಈ ನಡುವೆ ಉಗ್ರಗಾಮಿ ಬೋಧಕ ಅಮೃತಪಾಲ್ ಸಿಂಗ್ ಅವರ ಚಿಕ್ಕಪ್ಪ ಹರ್ಜಿತ್ ಸಿಂಗ್ ಅವರನ್ನು ಪಂಜಾಬ್ ಪೊಲೀಸರು ಮಂಗಳವಾರ ಬೆಳಿಗ್ಗೆ ಅಸ್ಸಾಂಗೆ ಕರೆತಂದಿದ್ದಾರೆ.