ಹೈದರಾಬಾದ್, ಮಾ 21 (DaijiworldNews/HR): ಹೈದರಾಬಾದ್ನಲ್ಲಿ ಆಲಿಕಲ್ಲು ಮಳೆಯಾಗಿ ಅಹಮದಾಬಾದ್ನಿಂದ ಹೈದರಾಬಾದ್ಗೆ ಬಂದ ಇಂಡಿಗೋ ವಿಮಾನವು ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಳಿಯುವಾಗ ಆಲಿಕಲ್ಲು ಮಳೆಗೆ ಸಿಲುಕಿ ಸಣ್ಣ ಹಾನಿಯಾಗಿದೆ.
ಆಲಿಕಲ್ಲು ಮಳೆಯಲ್ಲಿ ವಿಮಾನದ ರೇಡೋಮ್ ಮತ್ತು ವಿಂಡ್ಶೀಲ್ಡ್ಗಳು ಹಾನಿಗೊಳಗಾಗಿದೆ. ಆದರೆ ಸುರಕ್ಷಿತವಾಗಿ ಇಳಿಯುವಲ್ಲಿ ಯಶಸ್ವಿಯಾಯಿತು.
ಇನ್ನು 6E 6594 ವಿಮಾನವು ನಗರದಿಂದ ಸುಮಾರು 30 ಕಿಮೀ ದೂರದಲ್ಲಿರುವ ಶಂಶಾಬಾದ್ನ ವಿಮಾನ ನಿಲ್ದಾಣದ ಕಡೆಗೆ ಇಳಿಯುವಾಗ ಆಲಿಕಲ್ಲು ಮಳೆಗೆ ಅಪ್ಪಳಿಸಿತು.