ನವದೆಹಲಿ, ಮಾ 21 (DaijiworldNews/HR): ದೆಹಲಿಯ ಹಿಂದಿನ ಅಬಕಾರಿ ನೀತಿಯ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರ ಪುತ್ರಿ ಕೆ. ಕವಿತಾ ಅವರನ್ನು ಸೋಮವಾರ ಇಡಿಯು 10 ಗಂಟೆಗಳ ವಿಚಾರಣೆ ನಡೆಸಿದ ಬಳಿಕ ಇದೀಗ ಮತ್ತೊಮ್ಮೆ ಮಂಗಳವಾರ ಸಮನ್ಸ್ ಜಾರಿ ಮಾಡಿದೆ ಎಂದು ತಿಳಿದುಬಂದಿದೆ.
ಸೋಮವಾರದಂದು ಬೆಳಿಗ್ಗೆ 10.30ಕ್ಕೆ ಕವಿತಾ ಅವರು ದೆಹಲಿ ಕಚೇರಿಗೆ ಆಗಮಿಸಿದ್ದು, ಈ ವೇಳೆ ವಿಚಾರಣೆ ಆರಂಭಿಸಿದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ರಾತ್ರಿ 9.15ಕ್ಕೆ ಮುಕ್ತಾಯಗೊಳಿಸಿದ್ದು, ಇದೀಗ ಮರಳಿ ವಿಚಾರಣೆಗೆ ಹಾಜರಾಗುವಂದೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸಮನ್ಸ್ ಜಾರಿ ಮಾಡಿದೆ.
ಕವಿತಾ ಅವರನ್ನು ಮಾರ್ಚ್ 11 ರಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸುಮಾರು ಒಂಬತ್ತು ಗಂಟೆಗಳ ಕಾಲ ಮೊದಲು ವಿಚಾರಣೆ ನಡೆಸಿದ್ದು, ನಂತರ ಮಾರ್ಚ್ 16 ರಂದು ಅವರಿಗೆ ಮತ್ತೆ ಸಮನ್ಸ್ ಮಾಡಲಾಗಿತ್ತು.