ಕೋಲ್ಕತ್ತಾ, ಮಾ 20 (DaijiworldNews/HR): ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿಯ ಬಹುದೊಡ್ಡ ಟಿಆರ್ಪಿ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ತೃಣಮೂಲ ಕಾಂಗ್ರೆಸ್ನ ಆಂತರಿಕ ಸಭೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿರುವ ಮಮತಾ ಬ್ಯಾನರ್ಜಿ, ರಾಹುಲ್ ಗಾಂಧಿಯವರು ಪ್ರತಿಪಕ್ಷದ ಮುಖವಾಗಿದ್ದರೇ, ಯಾರೂ ಪ್ರಧಾನಿ ಮೋದಿಯನ್ನು ಟೀಕಿಸಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ ಬಿಜೆಪಿಯು ರಾಹುಲ್ ಅವರನ್ನು ನಾಯಕನಾಗಿ ಇರಿಸಿಕೊಳ್ಳಲು ಬಯಸುತ್ತದೆ ಎಂದರು.
ಇನ್ನು ಬಿಜೆಪಿಯ ಮುಂದೆ ಕಾಂಗ್ರೆಸ್ ತಲೆಬಾಗುತ್ತಿದ್ದು, ಕಾಂಗ್ರೆಸ್ ಸಿಪಿಎಂ ಹಾಗೂ ಬಿಜೆಪಿಯು ಅಲ್ಪಸಂಖ್ಯಾತರನ್ನು ತೃಣಮೂಲ ಕಾಂಗ್ರೆಸ್ನ ವಿರುದ್ಧ ಪ್ರಚೋದಿಸುತ್ತಿದೆ ಎಂದು ಆರೋಪಿಸಿದ್ದಾರೆ.
ರಾಹುಲ್ ಗಾಂಧಿ ಅವರ ವಿಷಯವನ್ನೇ ಮುಂದಿಟ್ಟುಕೊಂಡು ಬಿಜೆಪಿ ಸಂಸತ್ತಿನ ಕಾರ್ಯನಿರ್ವಹಣೆಗೆ ಅವಕಾಶ ನೀಡುತ್ತಿಲ್ಲ. ಸಂಸತ್ತಿನಲ್ಲಿ ಅದಾನಿ ಹಾಗೂ ಎಲ್ಐಸಿ ವಿಷಯದ ಬಗ್ಗೆ ಚರ್ಚೆ ನಡೆಯಬೇಕು, ಆದರೆ ಎಲ್ಐಸಿ ಹಾಗೂ ಅದಾನಿ ವಿಚಾರದ ಕುರಿತು ಚರ್ಚೆಗಳು ನಡೆಯುತ್ತಿಲ್ಲ. ಗ್ಯಾಸ್ ಬೆಲೆಯ ಬಗ್ಗೆಯೂ ಚರ್ಚೆಯಾಗುತ್ತಿಲ್ಲ, ಇದೆಲ್ಲದರ ನಡುವೆ ಏಕರೂಪ ನಾಗರಿಕ ಸಂಹಿತೆ ಪ್ರತಿಯನ್ನು ಜಾರಿಗೆ ತರಲಾಗಿದೆ. ನಾವು ಏಕರೂಪ ನಾಗರಿಕ ಸಂಹಿತೆಯನ್ನು ಒಪ್ಪುವುದಿಲ್ಲ, ಅದನ್ನು ಜಾರಿಗೆ ತರಲು ನಾವು ಅನುಮತಿಸುವುದಿಲ್ಲ ಎಂದು ಟಿಎಂಸಿ ಹೇಳಿದ್ದಾರೆ.