ಮೊರೆನಾ, ಮಾ 19 (DaijiworldNews/DB): ದೇವಸ್ಥಾನಕ್ಕೆ ಪಾದಯಾತ್ರೆ ಕೈಗೊಂಡಿದ್ದ ಭಕ್ತರು ಚಂಬಲ್ ನದಿ ದಾಟುತ್ತಿದ್ದ ವೇಳೆ ಮಹಿಳೆ ಸಹಿತ ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಮಧ್ಯಪ್ರದೇಶದ ಮೊರೆನಾ ಜಿಲ್ಲೆಯಲ್ಲಿ ನಡೆದಿದೆ. ಘಟನೆಯಲ್ಲಿ ಐವರು ನಾಪತ್ತೆಯಾಗಿದ್ದಾರೆ.
ದಿಯೋಕಿನಂದನ್ ಕುಶ್ವಾಹ್ ( 55) ಹಾಗೂ ಕಲ್ಲೋ ಕುಶ್ವಾಹ್ ( 40) ಮೃತಪಟ್ಟವರು. ಇಬ್ಬರ ಮೃತದೇಹಗಳನ್ನು ನದಿಯಿಂದ ಮೇಲಕೆತ್ತಲಾಗಿದೆ. ದಿಯೋಕಿನಂದನ್ ಕುಶ್ವಾಹ್ ಅವರ ಪತ್ನಿ ಅಲೋಪಾ ಕುಶ್ವಾಹ್, ರುಕ್ಮಿಣಿ ಕುಶ್ವಾಹ್, ಲವ್ಕುಶ್ ಕುಶ್ವಾಹ್ ಬ್ರಿಜ್ಮೋಹನ್ ಕುಶ್ವಾಹ್ ಮತ್ತು ರಶ್ಮಿ ಕುಶ್ವಾಹ್ ನಾಪತ್ತೆಯಾಗಿದ್ದಾರೆ. ನಾಪತ್ತೆಯಾದವರನ್ನು ರಕ್ಷಿಸುವ ಕಾರ್ಯಾಚಾರಣೆ ಮುಂದುವರಿದಿದೆ ಎಂದು ತಿಳಿದು ಬಂದಿದೆ.
ರಾಜಸ್ಥಾನದ ಕರೌಲಿ ಜಿಲ್ಲೆಯ ಕೈಲಾ ದೇವಿ ದೇವಸ್ಥಾನಕ್ಕೆ 17 ಮಂದಿ ಭಕ್ತರು ದೇವಿಯ ದರ್ಶನ ಪಡೆಯಲೆಂದು ಗ್ವಾಲಿಯರ್-ಚಂಬಲ್ ಪ್ರದೇಶದ ಶಿವಪುರಿ ಜಿಲ್ಲೆಯ ಹಳ್ಳಿಯೊಂದರಿಂದ ಪಾದಯಾತ್ರೆ ಕೈಗೊಂಡಿದ್ದರು.