ಹುಬ್ಬಳ್ಳಿ, ಮಾ 19 (DaijiworldNews/HR): ಉರಿಗೌಡ, ನಂಜೇಗೌಡ ಸ್ವಾಭಿಮಾನಿಗಳು, ಅವರು ಧರ್ಮಕ್ಕಾಗಿ ಹೋರಾಟ ಮಾಡಿದವರಾಗಿದ್ದು, ಅವರನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಅಪಮಾನ ಮಾಡಿದ್ದಾರೆ ಎಂದು ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ಉರಿಗೌಡ, ನಂಜೇಗೌಡ ಸ್ವಾಭಿಮಾನಿಗಳು, ಅವರು ಧರ್ಮಕ್ಕಾಗಿ, ನಮ್ಮ ದೇವಸ್ಥಾನ ಉಳಿಸುವುದಾಕ್ಕಾಗಿ ಹೋರಾಟ ಮಾಡಿದವರಾಗಿದ್ದಾರೆ ಎಂದರು.
ಟಿಪ್ಪು ಸುಲ್ತಾನ್ ಮಂಗಳೂರಿನಲ್ಲಿ ಕ್ರೈಸ್ತರ ಹಾಗೂ ಕೊಡವರ ನರಮೇಧವನ್ನು ಕೊಡಗಿನಲ್ಲಿ ಮಾಡಿದ್ದಾರೆ. ನಂದಿ ಬೆಟ್ಡದ ಮೇಲೆ ಹಿಂದುಗಳನ್ನು ಕೊಂದು ಹಾಕಿದ್ದಾರೆ. ಕನ್ನಡ ವಿರೋಧಿಯಾಗಿದ್ದವರ ವಿರುದ್ಧ ಸೆಟೆದು ನಿಂತವವರು ನಂಜೇಗೌಡ ಉರಿಗೌಡರು ಎಂದು ವಾಗ್ದಾಳಿ ನಡೆಸಿದರು.