ನವದೆಹಲಿ, ಮಾ 18 (DaijiworldNews/DB): ಖಲಿಸ್ತಾನ್ ಪ್ರತ್ಯೇಕವಾದಿ ಅಮೃತ್ ಪಾಲ್ ಸಿಂಗ್ ಹಾಗೂ ಆತನ ಅನುಯಾಯಿಗಳನ್ನು ಪಂಜಾಬ್ ಪೊಲೀಸರು ಜಲಂಧರ್ನಲ್ಲಿ ಬಂಧಿಸಿದ್ದಾರೆ.
ಪೊಲೀಸರನ್ನು ನೋಡಿದ ಅಮೃತ್ ಪಾಲ್ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಆದರೆ ಆತನನ್ನು ಬೆನ್ನಟ್ಟಿದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಎರಡು ವಾಹನಗಳನ್ನು ಇದೇ ವೇಳೆ ವಶಪಡಿಸಿಕೊಳ್ಳಲಾಗಿದೆ.
ಈಗಾಗಲೇ ಆತನ ವಿರುದ್ದ ಪೊಲೀಸರು ಮೂರು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ಇನ್ನು ಆತನ ಬಂಧನದ ಬಳಿಕ ರಾಜ್ಯದಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಎಚ್ಚರಿಕೆ ವಹಿಸಲಾಗಿದ್ದು, ರಾಜ್ಯದಲ್ಲಿ ಭಾನುವಾರ ಮಧ್ಯಾಹ್ನ 12 ಗಂಟೆಯವರೆಗೆ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ.
ಈ ಹಿಂದೆ ಮರ್ಸಿಡಿಸ್ ಕಾರಿನಲ್ಲಿ ಓಡಾಡುತ್ತಿದ್ದ ಆತನ ಬೇರೆ ಕಾರು ಖರೀದಿಸಿ ಭೂಗತನಾಗಿದ್ದ. ಸರ್ಕಾರದ ಮೇಲೆ ಹಲವು ದಿನಗಳಿಂದ ಆತನ ಬಂಧನಕ್ಕಾಗಿ ಒತ್ತಡಗಳಿದ್ದವು. ಇದೀಗ ಆತ ಪೊಲೀಸ್ ವಶವಾಗಿದ್ದಾನೆ ಎಂದು ವರದಿಯಾಗಿದೆ.