ಜೈಪುರ, ಮಾ (DaijiworldNews/HR): ಎರಡು ಕೈಗಳನ್ನು ಕಳೆದುಕೊಂಡ ವ್ಯಕ್ತಿಗೆ ಯಶಸ್ವಿಯಾಗಿ ತೋಳುಗಳ ಕಸಿ ಮಾಡಿರುವ ಘಟನೆ ವರದಿಯಾಗಿದ್ದು, ಇದು ಏಷ್ಯಾದಲ್ಲೇ ಮೊದಲಾಗಿದೆ.
ರಾಜಸ್ಥಾನದ ಅಜ್ಮೀರ್ ಮೂಲದ ಪ್ರೇಮಾ ರಾಮ್(33) ಎರಡೂ ತೋಳುಗಳ ಕಸಿಗೆ ಒಳಗಾದ ಏಷ್ಯಾದ ಮೊದಲ ವ್ಯಕ್ತಿಯಾಗಿದ್ದು, ಮುಂಬೈನ ಗ್ಲೋಬಲ್ ಆಸ್ಪತ್ರೆಯ ವೈದ್ಯರ ತಂಡ 16 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆಯನ್ನು ಮಾಡುವ ಮೂಲಕ ತೋಳುಗಳ ಕಸಿಯನ್ನು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಇನ್ನು 10 ವರ್ಷದ ಹಿಂದೆ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಪ್ರೇಮಾ ರಾಮ್ ಅವರಿಗೆ ವಿದ್ಯುತ್ ಕಂಬದಿಂದ ಶಾಕ್ ತಾಗಿ ಕೈಗಳಿಗೆ ಗಂಭೀರ ಸ್ವರೂಪದ ಗಾಯಾಗಳಾಗಿ, ಜೀವ ಉಳಿಯಬೇಕಾದರೆ ಕೈಗಳನ್ನು ಕತ್ತರಿಸುವ ಪರಿಸ್ಥಿತಿ ಬರುತ್ತದೆ. ಕೈಗಳಲ್ಲಿದೆ ಕೃತಕ ಕೈಗಳನ್ನು ಅಳವಡಿಸಲು ಕುಟುಂಬ ಪ್ರಯತ್ನಿಸುತ್ತದೆ. ಅದರಿಂದ ಕೆಲಸ ಮಾಡಲು ಆಗುವುದಿಲ್ಲ. ತೋಳುಗಳ ಹಂತದಿಂದ ಕೈಗಳನ್ನು ಕತ್ತರಿಸಿದ ಬಳಿಕ ಕುಟುಂಬದವರ ಬೆಂಬಲದಿಂದ ಕೈಗಳು ಮಾಡಬೇಕಾದ ಕಾರ್ಯವನ್ನು ಕಾಲುಗಳಿಂದಲೇ ಮಾಡಲು ಪ್ರೇಮಾ ರಾಮ್ ಅಭ್ಯಾಸ ಮಾಡಿಕೊಳ್ಳುತ್ತಾರೆ.
ಇನ್ನು ಹತ್ತಾಕ್ಕೂ ಹೆಚ್ಚಿನ ವರ್ಷದ ಬಳಿಕ ಇದೀಗ ಯಶಸ್ವಿಯಾಗಿ ಪ್ರೇಮಾ ರಾಮ್ ಎರಡೂ ತೋಳುಗಳ ಕಸಿ ಮಾಡಿಸಿಕೊಂಡಿದ್ದು, ಈ ಕಸಿ ಕ್ರಿಯೆ ಆದ ಏಷ್ಯಾದ ಮೊದಲ ವ್ಯಕ್ತಿ ಪ್ರೇಮಾ ರಾಮ್ ಆಗಿದ್ದಾರೆ.