ನಾಗಾಲ್ಯಾಂಡ್, ಮಾ 17 (DaijiworldNews/HR): ನಾಗಾಲ್ಯಾಂಡ್ನ ಕೋಹಿಮಾ ಜಿಲ್ಲೆಯ ಕಿಗ್ವೆಮಾ ಎಂಬ ಗ್ರಾಮದ ಹಿರಿಯಜ್ಜಿ ಪುಪಿರೇಯ್ ಫುಕಾ ತಮ್ಮ 121ನೇ ವಯಸ್ಸಿನಲ್ಲಿ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ.
ವಿಚಾಪಾ ಫುಕಾರೊಂದಿಗೆ ವಿವಾಹವಾಗಿದ್ದ ಪುಪಿರೇಯ್ಗೆ ನಾಲ್ವರು ಮಕ್ಕಳು - ಮೂರು ಪುತ್ರರು ಹಾಗೂ ಒಬ್ಬ ಪುತ್ರಿ ಇದ್ದು, ನಾಗಾಲ್ಯಾಂಡ್ನ ಮೊಟ್ಟ ಮೊದಲ ಮೆಟ್ರಿಕ್ಯುಲೇಟ್, ಪದವೀಧರ, ಹಾಗೂ ಗೆಜ಼ೆಟೆಡ್ ಅಧಿಕಾರಿಯಾಗಿದ್ದ ಅವರ ಮೊದಲ ಪುತ್ರ 1989ರಲ್ಲಿ ನಿಧನರಾಗಿದ್ದಾರೆ.
ಇನ್ನು ಪುಪಿರೇಯ್ರ ಪತಿ 1969ರಲ್ಲಿ ಕೊನೆಯುಸಿರೆಳೆದಿದ್ದು, ಅವರ ನಾಲ್ಕೂ ಮಕ್ಕಳು ಅದಾಗಲೇ ಮೃತಪಟ್ಟಿದ್ದಾರೆ - ಮೂವರು 1980ರ ದಶಕದಲ್ಲಿ ಮತ್ತು 1990ರ ದಶಕದಲ್ಲಿ, ಮತ್ತೊಬ್ಬರು ಆಗಸ್ಟ್ 15, 2020ರಂದು, ತಮ್ಮ 82ನೇ ವಯಸ್ಸಿನಲ್ಲಿ. ಪುಪಿರೇಯ್ಗೆ 18 ಮೊಮ್ಮಕ್ಕಳಿದ್ದು, 56 ಮರಿಮಕ್ಕಳು ಹಾಗೂ 12 ಮರಿ ಮೊಮ್ಮಕ್ಕಳಿದ್ದಾರೆ.