ಬಟಿಂಡಾ, ಮಾ 17 (DaijiworldNews/HR): ಸೆಂಟ್ರಲ್ ಜೈಲಿನಲ್ಲಿರುವ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯ್ ಅವರನ್ನು ನೋಡಲೆಂದು ಇಬ್ಬರು ಅಪ್ರಾಪ್ತ ಬಾಲಕಿಯರು ಮನೆ ಬಿಟ್ಟು ಜೈಲಿಗೆ ತೆರಳಿದ ಘಟನೆ ನಡೆದಿದೆ.
ಜೈಲಿನ ಹೊರಗೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ಅಪ್ರಾಪ್ತ ವಯಸ್ಕ ಬಾಲಕಿಯರನ್ನು ಜೈಲು ಆಡಳಿತ ಜಿಲ್ಲಾ ಮಕ್ಕಳ ರಕ್ಷಣಾ ಇಲಾಖೆಗೆ ಒಪ್ಪಿಸಿದೆ.
ಈ ಕುರಿತು ಮಾತನಾಡಿರುವ ಬಟಿಂಡಾದ ಮಕ್ಕಳ ರಕ್ಷಣಾ ಅಧಿಕಾರಿ ರವನೀತ್ ಕೌರ್ ಸಿಧು, ಹುಡುಗಿಯರು ಬಟಿಂಡಾ ಸೆಂಟ್ರಲ್ ಜೈಲಿನ ಹೊರಗೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. ಅವುಗಳನ್ನು ತಮ್ಮ ಸ್ನೇಹಿತರ ವಲಯಗಳಲ್ಲಿ ಕಳುಹಿಸಲು ಬಯಸಿದ್ದು, ಈ ಬಾಲಕಿಯರು ಸಾಮಾಜಿಕ ಮಾಧ್ಯಮದಲ್ಲಿ ಲಾರೆನ್ಸ್ ಬಿಷ್ಣೋಯ್ ನಿಂದ ಪ್ರಭಾವಿತರಾಗಿದ್ದಾರೆ ಎಂದು ಹೇಳಿದ್ದಾರೆ.
ಇನ್ನು ಅಪ್ರಾಪ್ತ ಬಾಲಕಿಯರು ತಮ್ಮ ಮನೆಯಲ್ಲಿ ಸುಳ್ಳು ಹೇಳಿ ಬಟಿಂಡಾ ತಲುಪಿದ್ದಾರೆ. ಇಬ್ಬರೂ ಬಟಿಂಡಾ ರೈಲ್ವೆ ನಿಲ್ದಾಣದಲ್ಲಿ ರಾತ್ರಿ ಕಳೆದಿದ್ದರು. ಅವರ ಸ್ನೇಹಿತರು, ಅವರೆಲ್ಲರೂ ಸಾಮಾಜಿಕ ಮಾಧ್ಯಮದಲ್ಲಿ ಲಾರೆನ್ಸ್ ಬಿಷ್ಣೋಯ್ ನಿಂದ ಪ್ರಭಾವಿತರಾಗಿದ್ದಾರೆ ಎನ್ನಲಾಗಿದೆ.