ಬೆಂಗಳೂರು, ಮಾ 17(DaijiworldNews/MS): 2022-23ನೇ ಸಾಲಿನಲ್ಲಿ ರಾಜ್ಯ ಪಠ್ಯಕ್ರಮದ ಎಲ್ಲಾ ಶಾಲೆಗಳಲ್ಲಿ ಐದು ಮತ್ತು ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆಗಳು (ಮೌಲ್ಯಾಂಕನ) ನಡೆಸಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಪರಿಷ್ಕೃತ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.
ಐದನೇ ತರಗತಿಗೆ ಮಾರ್ಚ್ 27ರಿಂದ 30ರವರೆಗೆ ನಾಲ್ಕು ದಿನಗಳು, ಎಂಟನೇ ತರಗತಿಗೆ ಮಾರ್ಚ್ 27ರಿಂದ ಏಪ್ರಿಲ್ 1ರವರೆಗೆ 6 ದಿನಗಳು ಪರೀಕ್ಷೆಗಳು ನಡೆಯಲಿವೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಆಯಾ ಶಾಲೆಗಳನ್ನೇ ಮೌಲ್ಯಾಂಕನ ಕೇಂದ್ರಗಳಾಗಿ ಪರಿಗಣಿಸಿದೆ
5ನೇ ತರಗತಿ ವೇಳಾಪಟ್ಟಿ
27-03-2023: ಪ್ರಥಮ ಭಾಷೆ - ಕನ್ನಡ, ಇಂಗ್ಲಿಷ್, ಹಿಂದಿ, ಉರ್ದು, ಮರಾಠಿ, ತೆಲಗು, ತಮಿಳು.
28-03-2023: ದ್ವಿತೀಯ ಭಾಷೆ - ಇಂಗ್ಲಿಷ್, ಕನ್ನಡ.
29-03-2023: ಕೋರ್ ವಿಷಯ - ಪರಿಸರ ಅಧ್ಯಯನ.
30-03-2023:ಕೋರ್ ವಿಷಯ- ಗಣಿತ.
8ನೇ ತರಗತಿ ವೇಳಾಪಟ್ಟಿ
27-03-2023:ಕನ್ನಡ, ಇಂಗ್ಲಿಷ್, ಇಂಗ್ಲಿಷ್ (NCERT), ಹಿಂದಿ, ಉರ್ದು, ಮರಾಠಿ, ತೆಲಗು, ತಮಿಳು, ತೆಲುಗು, ಸಂಸ್ಕೃತ.
28-03-2023: ದ್ವಿತೀಯ ಭಾಷೆ- ಇಂಗ್ಲಿಷ್, ಕನ್ನಡ.
29-03-2023:ಹಿಂದಿ, ಹಿಂದಿ (NCERT), ಕನ್ನಡ, ಇಂಗ್ಲಿಷ್, ಅರೇಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ, ಕೊಂಕಣಿ, ತುಳು.
30-03-2023:ಕೋರ್ ವಿಷಯ- ಗಣಿತ.
31-03-2023 :ಕೋರ್ ವಿಷಯ - ವಿಜ್ಞಾನ.
01-04-2023:ಕೋರ್ ವಿಷಯ ಸಮಾಜ ವಿಜ್ಞಾನ.
ಪ್ರತಿ ಪತ್ರಿಕೆಯು ತಲಾ 40 ಅಂಕಗಳ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಒಂದು ಅಂಕದ 20 ಬಹು ಆಯ್ಕೆಯ ಪ್ರಶ್ನೆಗಳು, 20 ಅಂಕಗಳಿಗೆ ವಿವರಣಾತ್ಮಕ ಉತ್ತರ ಬರೆಯುವ ಪ್ರಶ್ನೆಗಳಿರುತ್ತವೆ. ಅವುಗಳಲ್ಲಿ ಎರಡು ಅಂಕದ ಐದು ಪ್ರಶ್ನೆಗಳು, ಮೂರು ಅಂಕದ ಎರಡು ಪ್ರಶ್ನೆಗಳು, ನಾಲ್ಕು ಅಂಕದ ಒಂದು ಪ್ರಶ್ನೆಯನ್ನು ಪತ್ರಿಕೆಗಳು ಒಳಗೊಂಡಿರುತ್ತವೆ. ಉತ್ತರಿಸಲು ಎರಡು ಗಂಟೆ ಸಮಯ ನಿಗದಿ ಮಾಡಲಾಗಿದೆ.