ನವದೆಹಲಿ, ಮಾ 16(DaijiworldNews/MS): "ಲಂಡನ್ ಸೆಮಿನಾರ್ನಲ್ಲಿ ಭಾರತ ವಿರೋಧಿ ಏನನ್ನೂ ಹೇಳಿಲ್ಲ, ಸಂಸತ್ತಿನಲ್ಲಿ ಮಾತನಾಡಲು ಅವಕಾಶ ನೀಡಿದರೆ ಉತ್ತರ ನೀಡಲು ಸಿದ್ಧ" ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ತಿಳಿಸಿದ್ದಾರೆ.
ಇಂದು ಸಂಸತ್ ಗೆ ಆಗಮಿಸಿದ ಅವರು,ಅಧಿವೇಶನವನ್ನು ಮುಂದೂಡಿದ ನಂತರ ಸಂಸತ್ತಿನಿಂದ ಹೊರಡುವಾಗ, ಕ್ಷಮೆಯಾಚಿಸಬೇಕೆಂದು ಬಿಜೆಪಿ ಸಂಸದರ ಒತ್ತಾಯ ಮಾಡುತ್ತಿರುವ ವಿಚಾರವಾಗಿ ಮಾತನಾಡಿದ ಅವರು, ಭಾರತದ ವಿರುದ್ಧ ಏನನ್ನೂ ಮಾತನಾಡಲಿಲ್ಲ ನನು. ಸಂಸತ್ತಿನಲ್ಲಿ ಮಾತನಾಡಲು ಕೇಂದ್ರವು ಅವಕಾಶ ನೀಡಿದರೆ, ಲಂಡನ್ನಲ್ಲಿ ತಮ್ಮ ಭಾಷಣದ ಬಗ್ಗೆ ತಮ್ಮ ಅಭಿಪ್ರಾಯವನ್ನು ಹೇಳುತ್ತೇನೆ ಎಂದಿದ್ದಾರೆ.
ರಾಹುಲ್ ಗಾಂಧಿಯವರು ಲಂಡನ್ ನಲ್ಲಿ ನೀಡಿದ ಹೇಳಿಕೆ ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವೆ ಭಾರಿ ಘರ್ಷಣೆಗೆ ಸಂಸತ್ತು ಸಾಕ್ಷಿಯಾಗಿದೆ. ವಿದೇಶಿ ನೆಲದಲ್ಲಿ ಭಾರತವನ್ನು ಅವಮಾನಿಸಿರುವ ರಾಹುಲ್ ಗಾಂಧಿ ಸಂಸತ್ತಿನಲ್ಲಿ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ಒತ್ತಾಯಿಸಿದೆ.