ಫರಿದಾಬಾದ್, ಮಾ 16 (DaijiworldNews/HR): ಆಟವಾಡುತ್ತಿದ್ದಾಗ 2 ವರ್ಷದ ಮಗುವಿನ ತಲೆಯಲ್ಲಿ ಫ್ಯಾನ್ ಬ್ಲೇಡ್ ಸಿಲುಕಿಕೊಂಡಿದ್ದು, ಬಳಿಕ ಫರಿದಾಬಾದ್ನ ಫೋರ್ಟಿಸ್ ಎಸ್ಕಾರ್ಟ್ಸ್ ಆಸ್ಪತ್ರೆಯ ನರಶಸ್ತ್ರ ಚಿಕಿತ್ಸಾ ವಿಭಾಗದ ಡಾ ನಿತೀಶ್ ಅಗರ್ವಾಲ್ ನೇತೃತ್ವದ ವೈದ್ಯರ ತಂಡವು ಯಶಸ್ವಿಯಾಗಿ 3 ಗಂಟೆಗಳ ಸುದೀರ್ಘ ಶಸ್ತ್ರಚಿಕಿತ್ಸೆಯ ಮೂಲಕ ಫ್ಯಾನ್ ಬ್ಲೇಡ್ ಅನ್ನು ಹೊರತೆಗೆದಿದ್ದಾರೆ.
ಆಸ್ಪತ್ರೆಗೆ ದಾಖಲಾದ ನಂತರ ಮಗುವು ಪ್ರಜ್ಞಾಪೂರ್ವಕ ಸ್ಥಿತಿಯಲ್ಲಿದ್ದು, ತಕ್ಷಣ ವೈದ್ಯರ ತಂಡ ವೈದ್ಯರು 3 ಗಂಟೆಗಳ ಸುದೀರ್ಘ ಶಸ್ತ್ರಚಿಕಿತ್ಸೆಯ ಮೂಲಕ ಫ್ಯಾನ್ ಬ್ಲೇಡ್ ಅನ್ನು ಹೊರತೆಗೆದಿದ್ದಾರೆ. ಶಸ್ತ್ರಚಿಕಿತ್ಸೆಯ ನಂತರ ಮಗುವನ್ನು ಪೀಡಿಯಾಟ್ರಿಕ್ ತೀವ್ರ ನಿಗಾ ಘಟಕಕ್ಕೆ (ಪಿಐಸಿಯು) ಸ್ಥಳಾಂತರಿಸಲಾಯಿತು ಮತ್ತು ನಂತರ ವಾರ್ಡ್ಗೆ ಸ್ಥಳಾಂತರಿಸಲಾಗಿದೆ.
ಇನ್ನು ಫರಿದಾಬಾದ್ನ ಫೋರ್ಟಿಸ್ ಎಸ್ಕಾರ್ಟ್ಸ್ ಆಸ್ಪತ್ರೆಯ ನರಶಸ್ತ್ರಚಿಕಿತ್ಸೆಯ ಕನ್ಸಲ್ಟೆಂಟ್ ಡಾ ನಿತೀಶ್ ಅಗರ್ವಾಲ್ ಅವರ ಪ್ರಕಾರ, ಫ್ಯಾನ್ ಬ್ಲೇಡ್ ಮಗುವಿನ ಮೆದುಳಿನ ಎಡಭಾಗವನ್ನು ಚುಚ್ಚಿದ್ದು, ಮಗುವಿನ ಮಾತಿನ ಮೇಲೆ ಪರಿಣಾಮ ಬೀರಬಹುದು ಎಂಬ ಗಂಭೀರ ಆತಂಕವಿತ್ತು. ಅಲ್ಲದೆ ಮೆದುಳಿನಲ್ಲಿ ರಕ್ತಸ್ರಾವ ಮತ್ತು ಹೆಮಟೋಮಾ (ಹೆಪ್ಪುಗಟ್ಟುವಿಕೆ) ಸಾಧ್ಯತೆ ಇತ್ತು, ಆದರೆ ನಾವು ಈ ಎಲ್ಲಾ ಸವಾಲುಗಳನ್ನು ನಿರ್ಣಯಿಸಿ ಬ್ಲೇಡ್ ಅನ್ನು ಹೊರತೆಗೆದಿದ್ದೇವೆ ಎಂದರು.