ಬೆಂಗಳೂರು, ಮಾ 14 (DaijiworldNews/MS): ಯಾರ ಮುಲಾಜಿಗೂ ನಾನು ಒಳಗಾಗಿಲ್ಲವೆಂದು ವಸತಿ ಸಚಿವ ವಿ. ಸೋಮಣ್ಣ ಭಾವುಕರಾಗಿ ಮಾತನಾಡಿದ್ದಾರೆ.
ಇಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡುವ ಸಂದರ್ಭ ಭಾವುಕರಾದ ಅವರು ತಾವು ರಾಜಕೀಯದಲ್ಲಿ ನಡೆದು ಬಂದ ಹಾದಿಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಹೊಟ್ಟೆಪಾಡಿಗಾಗಿ ಬೆಂಗಳೂರಿಗೆ ಬಂದು 6*8 ಅಡಿ ಜಾಗದಲ್ಲಿ ವಾಸಿಸುತ್ತಿದೆ. ೪ ಗಂಟೆಗೆ ಎದ್ದು ತಣ್ಣೀರು ಸ್ನಾನ ಮಾಡುತ್ತಿದೆ, ಸಂಜೆ ಕಾಲೇಜಿನಲ್ಲಿ ಓದಿದೆ. ಸ್ವಾಭಿಮಾನಕ್ಕೆ ಧಕ್ಕೆ ಆದರೆ ಯಾರನ್ನು ಕೇರ್ ಮಾಡಲ್ಲ, ಅಲ್ಲದೆ ಯಾರ ಮುಲಾಜಿನಲ್ಲೂ ನಾನಿಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ.
ತಾವು ಬಿಜೆಪಿಯನ್ನು ಬಿಡುತ್ತಿಲ್ಲ ಎಂದು ಸ್ಪಷ್ಟನೆ ನೀಡಿದ ಅವರು, ಕೆಲವರು ಸುಮ್ಮನೆ ತೇಜೋವಧೆ ಮಾಡುವ ಸಲುವಾಗಿ ಇಲ್ಲಸಲ್ಲದ ಮಾತುಗಳನ್ನು ಆಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.