ನವದೆಹಲಿ, ಮಾ 14 (DaijiworldNews/HR): ಭಾರತದಲ್ಲಿ ಕಾಡುತ್ತಿರುವ ಇನ್ಫ್ಲುಯೆಂಜಾ ಎ ಸಬ್ಟೈಪ್ ಎಚ್3ಎನ್2(H3N2) ವೈರಸ್ ಜೊತೆಗೆ ಹಂದಿ ಜ್ವರ ಅಥವಾ ಎಚ್1ಎನ್1(H1N1) ವೈರಸ್ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ತಿಳಿಸಿದೆ.
ಅಂಕಿಅಂಶಗಳ ಪ್ರಕಾರ, ಫೆಬ್ರವರಿವರೆಗೆ ಒಟ್ಟು 955 ಎಚ್1ಎನ್1 ಸೋಂಕುಗಳು ವರದಿಯಾಗಿದ್ದು, ತಮಿಳುನಾಡು (545), ಮಹಾರಾಷ್ಟ್ರ (170), ಗುಜರಾತ್ (74), ಕೇರಳ (72), ಮತ್ತು ಪಂಜಾಬ್ (28) ನಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ.
ಇನ್ನು ಮಾರ್ಚ್ ಅಂತ್ಯದಿಂದ ಈ ಸಂಖ್ಯೆ ಕಡಿಮೆಯಾಗುವ ನಿರೀಕ್ಷೆಯಿದೆ ಮತ್ತು ಸಂಖ್ಯೆಗಳನ್ನು ಟ್ರ್ಯಾಕ್ ಮಾಡಲಾಗುತ್ತಿದೆ ಮತ್ತು ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ಸಚಿವಾಲಯ ಹೇಳಿದೆ.