ಶ್ರೀನಗರ, ಮಾ 14 (DaijiworldNews/HR): ಭಯೋತ್ಪಾದನೆಗೆ ಹಣ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ರಾಷ್ಟ್ರೀಯ ತನಿಖಾ ದಳ(ಎನ್ಐಎ) ಜಮ್ಮು ಮತ್ತು ಕಾಶ್ಮೀರದ ವಿವಿಧೆಡೆ ದಾಳಿ ನಡೆಸಿ ತನಿಖೆ ನಡೆಸುತ್ತಿದ್ದಾರೆ.
ದೇಶದಲ್ಲಿ ಭಯೋತ್ಪಾದನ ಕೃತ್ಯಗಳನ್ನು ಎಸೆಗಲು ಹಣ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಎನ್ ಐಎ ಅಧಿಕಾರಿಗಳು ಹಲವೆಡೆ ಹಣದ ಮೂಲವನ್ನು ಹುಡುಕುವ ನಿಟ್ಟಿನಲ್ಲಿ ದಾಳಿ ನಡೆಸಿದ್ದಾರೆ.
ಇಂದು ಬೆಳಗ್ಗೆ ಕುಲ್ಗಾಮ್, ಪುಲ್ವಾಮಾ, ಅನಂತನಾಗ್ ಮತ್ತು ಶೋಪಿಯಾನ್ ಪ್ರದೇಶಗಳಲ್ಲಿ ಶಂಕಿತರ ನಿವಾಸಕ್ಕೆ ದಾಳಿ ನಡೆಸಿ ತನಿಖೆ ನಡೆಸಿದ್ದಾರೆ.