ಮಹಾರಾಷ್ಟ್ರ, ಮಾ 14 (DaijiworldNews/HR): ಮಹಾರಾಷ್ಟ್ರದ ಅಹಮದ್ನಗರ ಜಿಲ್ಲೆಯಲ್ಲಿ ತೆರೆದ ಕೊಳವೆ ಬಾವಿಗೆ ಬಿದ್ದಿದ್ದ 5 ವರ್ಷದ ಬಾಲಕ ಉಸಿರುಗಟ್ಟಿ ಮೃತಪಟ್ಟಿರುವ ಘಟನೆ ನಡೆದಿದೆ.
ಸಾಗರ್ ಬುಧ ಬರೇಲಾ (5) ಮೃತ ಬಾಲಕ.
ಸೋಮವಾರ ಸಂಜೆ 4 ಗಂಟೆಯ ವೇಳೆಗೆ ಜಮೀನವೊಂದರಲ್ಲಿ ತೆರೆದ ಕೊಳವೆ ಬಾವಿಗೆ ಬಾಲಕ ಬಿದ್ದಿದ್ದು, ಈ ವಿಚಾರ ಅಧಿಕಾರಿಗಳಿಗೆ ತಲುಪುತ್ತಿದ್ದಂತೆ ಎನ್ ಡಿಆರ್ ಎಫ್ ರಕ್ಷಣಾ ಸಿಬ್ಬಂದಿ ತಕ್ಷಣ ಕಾರ್ಯಾಚರಣೆಗೆ ಇಳಿದಿದ್ದಾರೆ. ಆ್ಯಂಬುಲೆನ್ಸ್, ಆಕ್ಸಿಜನ್, ವೈದ್ಯರು ಎಲ್ಲರೂ ಘಟನಾ ಸ್ಥಳದಲ್ಲಿದ್ದು ಬಾಲಕನ ಚಲನವಲನವನ್ನು ಗಮನಿಸಿ ಆತನಿಗೆ ಕೃತಕ ಆಕ್ಸಿಜನ್ ನೆರವನ್ನು ನೀಡಿದ್ದಾರೆ.
ಇನ್ನು 200 ಅಡಿ ಆಳದ ಕೊಳವೆ ಬಾವಿಯಲ್ಲಿ 15 ಆಳದಲ್ಲಿ ಬಾಲಕ ಸಿಲುಕಿದ್ದಾನೆ. ಆತನನ್ನು ಉಳಿಸುವ ಎಲ್ಲಾ ಪ್ರಯತ್ನ ಮಾಡಿದರೂ ಬಾಲಕ ಸಾಗರ್ ಮಂಗಳವಾರ ಮುಂಜಾನೆ ಉಸಿರು ಗಟ್ಟಿ ಸಾವನ್ನಪ್ಪಿದ್ದು, ಬಾಲಕ ಮೃತಪಟ್ಟಿದ್ದರಿಂದ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ.