ನವದೆಹಲಿ, ಮಾ 13 (DaijiwordNews/HR): ಅವಿಭಜಿತ ಆಂಧ್ರ ಪ್ರದೇಶದ ಕೊನೆಯ ಮುಖ್ಯಮಂತ್ರಿ ಕಿರಣ್ ಕುಮಾರ್ ರೆಡ್ಡಿ ಅವರು ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಿರುವುದಾಗಿ ವರದಿಯಾಗಿದೆ.
ಕಾಂಗ್ರೆಸ್ ಪಕ್ಷದ ಅಧ್ಯಕ್ಷರಿಗೆ ಬರೆದ ಪತ್ರದಲ್ಲಿ, ದಯವಿಟ್ಟು ನನ್ನ ಈ ಪತ್ರವನ್ನು ರಾಷ್ಟ್ರೀಯ ಕಾಂಗ್ರೆಸ್ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆಯಾಗಿ ಸ್ವೀಕರಿಸಿ ಎಂದು ಹೇಳಿದ್ದಾರೆ
ಇನ್ನು ಅವಿಭಜಿತ ಆಂಧ್ರಪ್ರದೇಶವನ್ನು ವಿಭಜಿಸಿ ಪ್ರತ್ಯೇಕ ತೆಲಂಗಾಣವನ್ನು ರೂಪಿಸಲು ಯುಪಿಎ ಸರ್ಕಾರ ನಿರ್ಧರಿಸಿದ ಬಳಿಕ ಕಿರಣ್ ಕುಮಾರ್ ರೆಡ್ಡಿ ಅವರು 2014 ರಲ್ಲಿ ಕಾಂಗ್ರೆಸ್ಗೆ ರಾಜಿನಾಮೆ ನೀಡಿ ಬಳಿಕ ತಮ್ಮದೇ ʻಜೈ ಸಮೈಕ್ಯಂಧ್ರ ಪಕ್ಷʼವನ್ನು ಕಟ್ಟಿದ್ದರು. ಅದರಿಂದಲೇ 2014 ರ ಲೋಕಸಭೆ ಚುನಾವಣೆಗೂ ಸ್ಪರ್ಧಿಸಿದ್ದರು. ಆ ಬಳಿಕ ಚುನಾವಣಾ ಆದಾಯವಿಲ್ಲದ್ದರಿಂದ ಮತ್ತೆ 2018ರಲ್ಲಿ ಕಾಂಗ್ರೆಸ್ಗೆ ಮರುಸೇರ್ಪಡೆಯಾಗಿ ಇದೀಗ ಮತ್ತೆ ಕಾಂಗ್ರೆಸ್ಗೆ ರಾಜಿನಾಮೆ ನೀಡಿದ್ಧಾರೆ.