ತುಮಕೂರು, ಮಾ 08 (DaijiworldNews/MS): ಉಡುಪಿಯಲ್ಲಿರುವ ಪ್ರಸಿದ್ಧ ಶ್ರೀಕೃಷ್ಣ ಮಠ ನಿರ್ಮಾಣಕ್ಕೆ ಮುಸ್ಲಿಂ ರಾಜರೊಬ್ಬರು ಜಾಗ ನೀಡಿದ್ದಾರೆ ಎಂಬ ಕಾಂಗ್ರೆಸ್ ಮುಖಂಡ ಮಿಥುನ್ ರೈ ಅವರ ಹೇಳಿಕೆಗೆ ಕೃಷ್ಣ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಪ್ರತಿಕ್ರಿಯಿಸಿದ್ದು, "ಯಾರಾದರೂ ಕೂಡಾ ಯಾವ ಹೇಳಿಕೆಯನ್ನ ಕೂಡ ಕೊಡಬಹುದು. ಆದ್ರೆ ಅಂತಹ ಹೇಳಿಕೆಯನ್ನ ಕೊಡಬೇಕು ಅಂದರೆ , ಅದಕ್ಕೆ ಸೂಕ್ತವಾದ ಆಧಾರವನ್ನ ಕೊಟ್ಟೆ ಆ ಮಾತಿಗೆ ಬೆಲೆ ಇರುತ್ತೆ. ಆಧಾರ ರಹಿತವಾಗಿ ಏನು ಬೇಕಾದ್ರೂ ಹೇಳಬಹುದು" ಎಂದು ಹೇಳಿದ್ದಾರೆ.
ತುಮಕೂರಿನಲ್ಲಿ ಮಧ್ಯಮದ ಮುಂದೆ ಮಾತನಾಡಿದ ಪೇಜಾವರ ಶ್ರೀ, "ಹೇಳಿಕೆ ಕೊಟ್ಟವರನ್ನ ಯಾಕೆ ಕೊಟ್ಟಿದ್ದೀರಿ ಎಂದು ಕೇಳ್ಬೇಕು, ಯಾಕೆಂದರೆ ಆಧಾರ ರಹಿತವಾದ ಮಾತನ್ನ ಇಟ್ಕೊಂಡುಚರ್ಚೆ ಬೆಳೆಸ್ತಾರೆ ಎಂದರೆ ಅದಕ್ಕೆ ಅರ್ಥವಿಲ್ಲ" ಎಂದು ಹೇಳಿದ್ದಾರೆ.
"ಉಡುಪಿಯ ಅನಂತೇಶ್ವರ ಸನ್ನಿಧಾನ ಇರಬಹುದು, ಕೃಷ್ಣ ಮಠದ ಸನ್ನಿಧಾನ ಇರಬಹುದು.ರಾಮಭೋಜ ಎಂಬ ಅರಸ ನೀಡಿರೋದಕ್ಕೆ ಆಧಾರಗಳಿವೆ. ಹಾಗಿರುವಾಗ
ಅದು ನಮಗೆ ಅದು ರಾಮಭೋಜ ಕೊಟ್ಟಿರುವಂತದ್ದು. ಇಲ್ಲಿ ಗುರುಗಳ ಹೇಳಿಕೆಯನ್ನ ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಅದು ಇಲ್ಲಿ ಅಲ್ಲ ಮಧ್ವಾಚಾರ್ಯರು ಎಲ್ಲ ಶಿಷ್ಯರೊಡನೆ ಸೇರಿಕೊಂಡು ಬದ್ರಿ ಯಾತ್ರೆಗೆ ಹೊರಟಿದ್ರು ಹಾಗೆ ಯಾತ್ರೆಗೆ ಹೋಗುವಾಗ ಗಂಗಾ ನದಿಯನ್ನ ದಾಟಿ ಹೋಗಬೇಕಿತ್ತು. ಆದರೆ ಅಲ್ಲಿ ಆಳ್ವಿಕೆ ಮಾಡುತ್ತಿದ್ದ ತುರ್ಕ ರಾಜ ನದಿ ದಾತಲು ಬೇಕಾಗಿದ್ದ ವ್ಯವಸ್ಥೆಯನ್ನು ನಿಲ್ಲಿಸಿದ್ದ. ಆಗ ಮಧ್ವಾಚಾರ್ಯರು ಹಾಗೂ ಶಿಷ್ಯರು ಈಜಲು ಮುಂದಾದಾಗ ಸೈನಿಕರು ಓಡಿಬಂದರು .ಆದ್ರೆ ಹೆದರದೇ ಮಧ್ವಾಚಾರ್ಯರು ಅವರಿಗೆ ತಿಳಿ ಹೇಳಿದ್ದರು, ಆ ಗ ರಾಜ ಆಚಾರ್ಯರ ವ್ಯಕ್ತಿತ್ವ ಕಂಡು ಅರ್ಧ ರಾಜ್ಯ ದಾನ ಮಾಡುತ್ತಾರೆ. ಇದನ್ನು ನಮ್ಮ ಗುರುಗಳು ಉಲ್ಲೇಖ ಮಾಡಿದ್ದರು ಹೊರತು ಉಡುಪಿ ಮಠ ಜಾಗವನ್ನು ಮುಸ್ಲಿಂ ರಾಜರು ನೀಡಿದ್ದು ಎಂದು ಹೇಳಿಲ್ಲ" ಎಂದು ಸ್ಪಷ್ಟಪಡಿಸಿದರು.
"ಮಿಥುನ್ ರೈ ಗೊಂದಲ ಹೇಳಿಕೆ ನೀಡಿದ್ದು, ಆಧಾರ ರಹಿತವಾಗಿರುವ ಈ ಚರ್ಚೆ ಬೆಳೆಸುವುದು ಅರ್ಥ ಹೀನ" ಎಂದು ಹೇಳಿದ್ದಾರೆ.