ಹೈದರಾಬಾದ್, ಫೆ 21 (DaijiworldNews/HR): ಬೀದಿ ನಾಯಿಗಳ ಹಿಂಡೊಂದು ಐದು ವರ್ಷದ ಬಾಲಕನನ್ನು ಕೊಂದಿರುವ ಘಟನೆ ತೆಲಂಗಾಣದ ನಿಜಾಮಾಬಾದ್ನಲ್ಲಿ ನಡೆದಿದೆ.
ಮೃತ ಮಗುವನ್ನು ಪ್ರದೀಪ್ ಎಂದು ಗುರುತಿಸಲಾಗಿದೆ.
ಬಾಲಕನ ತಂದೆ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ, ಸ್ಥಳದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಘಟಬೆಯ ದೃಶ್ಯ ಸೆರೆಯಾಗಿದೆ.
ವಿಡಿಯೋದಲ್ಲಿ ಮಗು ರಸ್ತೆಯಲ್ಲಿ ಒಂದೇ ನಡೆಯುತ್ತಿರುವುದು ಕಂಡು ಬಂದಿದ್ದು, ಸ್ವಲ್ಪ ಸಮಯದ ನಂತರ, ಮೂರು ನಾಯಿಗಳು ಬಾಲಕನ ಕಡೆಗೆ ಬಂದು ಅವನನ್ನು ಸುತ್ತುವರೆದಿವೆ. ಭಯಭೀತನಾದ ಬಾಲಕ ಓಡಲು ಪ್ರಯತ್ನಿಸಿದಾಗ ನಾಯಿಗಳು ಅವನ ಮೇಲೆ ದಾಳಿ ಮಾಡಿದೆ.