ಬೆಂಗಳೂರು, ಫೆ 19 (DaijiworldNes/HR): ಬೆಂಗಳೂರಿನ ಆಸ್ಪತ್ರೆಯಲ್ಲಿ 23 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಟಾಲಿವುಡ್ ನಟ, ರಾಜಕೀಯ ನಾಯಕ ನಂದಮೂರಿ ತಾರಕರತ್ನ( 39) ವಿಧಿವಶರಾಗಿದ್ದಾರೆ.
ನಂದಮೂರಿ ತಾರಕರತ್ನಗೆ ಜನವರಿ 27ರಂದು ಹೃದಯಸ್ತಂಭನವಾಗಿದ್ದು, ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯಕುಪ್ಪಂ ಬಳಿ ಟಿಡಿಪಿ ಪಾದಯಾತ್ರೆ ವೇಳೆ ಅವರು ಕುಸಿದುಬಿದ್ದಿದ್ದರು. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕರೆತರಲಾಗಿತ್ತು.
ಇನ್ನು 1983ರ ಫೆಬ್ರವರಿ 22ರಂದು ಜನಿಸಿದ್ದ ನಟ ತಾರಕರತ್ನ, ನಂದಮೂರಿ ಮೋಹನ್ಕೃಷ್ಣ, ನಂದಮೂರಿ ಶಾಂತಿ ಮೋಹನ್ ದಂಪತಿಯ ಪುತ್ರ, ಹೆಸರಾಂತ ನಟ, ಮಾಜಿ ಸಿಎಂ ಎನ್ಟಿಆರ್ ಮೊಮ್ಮಗ.
ತಾರಕರತ್ನ ಅವರು ಒಕಟೋ ನಂಬರ್ ಕುರ್ರಾಡು, ಭದ್ರಾದಿ ರಾಮುಡು, ಯುವರತ್ನ ಸೇರಿದಂತೆ 20 ಕ್ಕು ಹೆಚ್ಚು ಸಿನಿಮಾಗಳಲ್ಲಿ ನಟನೆ ಮಾಡಿದ್ದು, ತಾರಕರತ್ನ ಅವರು 2012ರಲ್ಲಿ ಅಲೇಖ್ಯಾ ರೆಡ್ಡಿ ಎನ್ನುವವರನ್ನು ಮದುವೆಯಾಗಿದ್ದರು.