ಶಿರಡಿ, ಜ 13 ( DaijiworldNews/MS): ಸಿನ್ನಾರ-ಶಿರಡಿ ಹೆದ್ದಾರಿಯಲ್ಲಿ ಪತ್ತಾರೆ ಶಿವಾರದ ಈಶಾನೇಶ್ವರ ದೇವಸ್ಥಾನದ ಕಮಾನು ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಹಲವರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
ಮುಂಬೈನಿಂದ ಶಿರಡಿಗೆ ತೆರಳುತ್ತಿದ್ದ ಖಾಸಗಿ ಬಸ್ (MH04 SK 2751) ಹಾಗೂ ಟ್ರಕ್ ನಡುವೆ ಡಿಕ್ಕಿಯಾಗಿ ಈ ದೊಡ್ಡ ಅವಘಡ ಸಂಭವಿಸಿದೆ ಎನ್ನಲಾಗಿದೆ. ಬಸ್ಸಿನಲ್ಲಿದ್ದ 50 ಪ್ರಯಾಣಿಕರು ಇದ್ದು, ಬಹುತೇಕರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.