ನವದೆಹಲಿ, ಜ 12 (DaijiworldNews/DB): ಭಾರತದ ದೃಷ್ಟಿಕೋನದಲ್ಲಿ ಹೊಸ ಇತಿಹಾಸ ಬರೆಯುವ ಸಮಯ ಈಗ ಬಂದಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ದೆಹಲಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಬ್ರಿಟಿಷರು ಭಾರತ ಬಿಟ್ಟು ಹೋಗಿದ್ದಾರೆ. ಆದರೆ ವಸಾಹತುಶಾಹಿ ಕಾಲದ ಅವಶೇಷ ಹಾಗೆಯೇ ಉಳಿದುಕೊಂಡಿದೆ. ಅದರಿಂದ ಮುಕ್ತಿ ಪಡೆದು ಹೊಸ ಇತಿಹಾಸ ಬರೆಯುವ ಸಮಯ ಇದು ಎಂದರು.
ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಅಹಿಂಸಾತ್ಮಕ ಹೋರಾಟದ ಕೊಡುಗೆ ದೊಡ್ಡದು. ಆದರೆ ಇದರಲ್ಲಿ ಪಾತ್ರ ವಹಿಸಿದವರ ಪಾತ್ರ ಇಲ್ಲ ಎಂಬುದು ಸರಿಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಶಸ್ತ್ರ ಕ್ರಾಂತಿಯು ಸಮಾಮಾಂತರವಾಗಿ ಆರಂಭವಾಗದೇ ಇರುತ್ತಿದ್ದರೆ ದೇಶಕ್ಕೆ ಸ್ವಾತಂತ್ರ್ಯ ಸಿಗುವುದೂ ತಡವಾಗುತ್ತಿತ್ತು. ಲಕ್ಷಾಂತರ ಮಂದಿಯ ತ್ಯಾಗ, ಹೋರಾಟದಿಂದಾಗಿ ಸ್ವಾತಂತ್ರ್ಯ ಸಿಕ್ಕಿದೆಯೇ ಹೊರತು ಇದೊಂದು ಅನುದಾನ ಸಿಕ್ಕಿದಂತಲ್ಲ ಎಂದು ಅಮಿತ್ ಶಾ ಹೇಳಿದರು.