ಬೆಂಗಳೂರು,ಮಾ.09(AZM):ಸಾಮಾಜಿಕ ಜಾಲತಾಣಗಳಲ್ಲಿ ರಾಕಿಂಗ್ ಸ್ಟಾರ್ ಯಶ್ ಹತ್ಯೆಗೆ ಸುಪಾರಿ ನೀಡಲಾಗುತ್ತಿದೆ ಎಂಬ ಸುದ್ದಿಗಳು ಹರಡುತ್ತಿದ್ದು, ಈ ಕುರಿತು ಸುದ್ಧಿಗೋಷ್ಠಿ ನಡೆಸಿರುವ ಅವರು ಮಾಧ್ಯಮಕ್ಕೆ ವಿವರಣೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಸುದ್ದಿಗೆ ಸಂಬಂಧಪಟ್ಟಂತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯಶ್ ಅವರು,. ಸುಪಾರಿ ಕೇಸ್ನ ಎಫ್ಐಆರ್ನಲ್ಲಿ ನನ್ನ ಹೆಸರಿಲ್ಲ. ಎಫ್ಐಆರ್ನಲ್ಲಿ ಕೇವಲ ಹೀರೋ ಎಂದು ನಮೂದಿಸಲಾಗಿದೆ. ನನ್ನ ಹತ್ಯೆಗೆ ಸುಪಾರಿ ನೀಡಲಾಗಿದೆ ಎಂಬ ವರದಿಗಳು ಸತ್ಯಕ್ಕೆ ದೂರವಾದುದು ಎಂದು ಹೇಳಿದರು.ಇನ್ನು ನನ್ನ ಕೊಲೆಗೆ ಸಂಚು ರೂಪಿಸಲಾಗಿದೆ ಎಂದು ಪದೇ ಪದೇ ಸುದ್ದಿಯಾಗುತ್ತಿದ್ದು, ಈ ರೀತಿಯ ಸುದ್ದಿಗಳಿಂದ ನಮ್ಮ ಕುಟುಂಬಸ್ಥರಿಗೆ ಆತಂಕವುಂಟಾಗುತ್ತಿದೆ ಎಂದು ಹೇಳಿದರು.
. ಕಲಾವಿದರ ಜೀವನದಲ್ಲಿ ಇಂತಹ ಸಂಗತಿಗಳೂ ನಡೆಯುತ್ತಿರುತ್ತವೆ. ನನ್ನನ್ನು ಯಾರೂ, ಏನೂ ಮಾಡಲು ಸಾಧ್ಯವಿಲ್ಲ ಎಂದು ಯಶ್ ಇದೇ ಸಂದರ್ಭದಲ್ಲಿ ಸ್ಪಷ್ಟನೆ ನೀಡಿದರು.