ನವದೆಹಲಿ,ಜ 08 ( DaijiworldNews/MS): ದೇಶಾದ್ಯಂತ ಎಲ್ಲಾ ವಲಯಗಳಲ್ಲಿ ಇಂಡಿಯನ್ ಸ್ಟಾಡಂರ್ಡ್ ಟೈಮ್ (ಐಎಸ್ಟಿ) ಕಡ್ಡಾಯಗೊಳಿಸಲು ಕೇಂದ್ರ ಸರಕಾರ ಮುಂದಾಗಿದೆ.
ಇದಕ್ಕಾಗಿ ಪ್ರತ್ಯೇಕ ನೀತಿಯೊಂದು ತರಲಿದೆ. ಇದು ಜಾರಿಯಾದಲ್ಲಿ ಟೆಲಿಕಾಂ ಸೇವಾ ಪೂರೈಕೆದಾರರು, ಇಂಟರ್ನೆಟ್ ಸೇವಾ ಪೂರೈಕೆದಾರರು, ಪವರ್ಗ್ರಿಡ್ಗಳು, ಬ್ಯಾಂಕ್ಗಳು, ಸ್ಟಾಕ್ ಎಕ್ಸ್ಚೇಂಜ್ ಇತ್ಯಾದಿ ಎಲ್ಲೆಡೆ ಒಂದೇ ಕಾಲಮಾನ ಇರಲಿದೆ. ಎಲ್ಲಾ ಸಂಪರ್ಕ ಜಾಲಗಳು ಮತ್ತು ಕಂಪ್ಯೂಟರ್ಗಳನ್ನು 'ಐಎಸ್ಟಿ' ಕಾಲಮಾನದೊಂದಿಗೆ ಅನುಸಂಧಾನ (ಸಿಂಕ್ರೊನೈಸ್) ಮಾಡುವುದರಿಂದ ಸಮಯದ ವ್ಯತ್ಯಾಸ ನಿವಾರಣೆಯಾಗಲಿದೆ.
ಸದ್ಯ'ಐಎಸ್ಟಿ' ಕಾಲಮಾನ ಕಡ್ಡಾಯವಲ್ಲ. 'ಐಎಸ್ಟಿ' ಅನುಸಂಧಾನ ಅನುಷ್ಠಾನದಿಂದ ಅತ್ಯಂತ ಸೂಕ್ಷ್ಮ ಕಾಲಮಾನ ವ್ಯತ್ಯಾಸಗಳೂ ನಿವಾರಣೆಯಾಗಲಿವೆ. ಒಟ್ಟಾರೆ ಭದ್ರತೆ, ಡಿಜಿಟಲ್ ಆಡಳಿತ, ಸಾರಿಗೆ , ಹಣಕಾಸು ವಹಿವಾಟು ಇತ್ಯಾದಿಗಳಿಗೆ ನಿಖರ ಕಾಲಮಾನವು ಅತ್ಯಗತ್ಯವಾಗಿದೆ.