ನವದೆಹಲಿ,ಮಾ 09(MSP): ಜಮ್ಮು ಕಾಶ್ಮೀರದ ಬಡಗಾಂವ್ ನ ಭಯೋತ್ಪಾದಕರು ಭಾರತೀಯ ಸೇನೆಯ ಯೋಧನ ಅಪಹರಿಸಿದ್ದಾರೆ ಎಂಬ ಮಾಧ್ಯಮ ವರದಿಗಳನ್ನು ರಕ್ಷಣಾ ಸಚಿವಾಲಯ ಸುಳ್ಳೆಂದು ಹೇಳಿ ಸಷ್ಟನೆ ನೀಡಿದ್ದು, ಮಾಧ್ಯಮಗಳಲ್ಲಿ ವರದಿಯಾದ ಯೋಧನು ಸುರಕ್ಷಿತನಿದ್ದಾನೆ ಎಂದು ಹೇಳಿದೆ.
ಯೋಧನನ್ನು ಅಪಹರಿಸಲಾಗಿದೆ ಎನ್ನುವ ಸುದ್ದಿ ಸತ್ಯಕ್ಕೆ ದೂರವಾದದ್ದು, ಇಂತಹ ಯಾವುದೇ ಊಹಾಪೋಹಗಳಿಗೆ ಕಿವಿಕೊಡಬೇಡಿ' ಎಂದು ರಕ್ಷಣಾ ಸಚಿವಾಲಯ ಟ್ವೀಟ್ ಮಾಡಿ ಪ್ರತಿಕ್ರಿಯೆ ನೀಡಿದೆ.
ಜಮ್ಮು ಕಾಶ್ಮೀರದ ಲೈಟ್ ಇನ್ಫ್ಯಾಂಟ್ರಿ ಘಟಕದ ಸೇನಾ ಯೋಧ ಮೊಹಮ್ಮದ್ ಯಾಸೀನ್ ಎಂಬವರನ್ನು ಉಗ್ರರು ಜಮ್ಮು ಕಾಶ್ಮೀರದ ಬಡಗಾಂವ್ನ ಛದೂರಾ ಪ್ರದೇಶದ ಕಾಜಿಪೋರದಲ್ಲಿ ಅಪಹರಿಸಿರುವುದಾಗಿ ಮಾಧ್ಯಮಗಳು ವರದಿ ಪ್ರಸಾರ ಮಾಡಿದ್ದವು ಈ ಹಿನ್ನಲೆಯಲ್ಲಿ ಸೇನೆ ಸ್ಪಷ್ಟನೆ ನೀಡಿದೆ.