ಬೆಂಗಳೂರು, ಜ 04 ( DaijiworldNews/MS):ಮುಂಬರುವ ವಿಧಾನಸಭೆ ಚುನಾವಣೆಗೆ ದಿನಗಳು ಹತ್ತಿರವಾಗುತ್ತಿರುವಂತೆ ಕೇಂದ್ರ ಚುನಾವಣಾ ಆಯೋಗದ ದೃಷ್ಟಿ ಕರ್ನಾಟಕದತ್ತ ನೆಟ್ಟಿದ್ದು ಇದಕ್ಕಾಗಿ ಕೇಂದ್ರ ಚುನಾವಣಾ ಆಯೋಗ ಪೂರ್ವ ಸಿದ್ಧತೆ ಪ್ರಾರಂಭಿಸಿದೆ.
ಈ ಹಿನ್ನಲೆ ಕೇಂದ್ರ ಆಯೋಗದ ಆಯುಕ್ತ ಅಜಯ್ ಭಾದೂ, ಕಾರ್ಯದರ್ಶಿ ಬಿ.ಸಿ. ಪಾತ್ರ ರಾಜ್ಯಕ್ಕೆ ಆಗಮಿಸಿದ್ದು, ಇಲ್ಲಿವರೆಗೆ ಚುನಾವಣೆಗೆ ಏನೆಲ್ಲ ತಯಾರಿ ನಡೆಸಲಾಗಿದೆ ಎಂಬ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. 2 ದಿನದ ಭೇಟಿಯಲ್ಲಿ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ.
224 ಕ್ಷೇತ್ರಗಳ ಕುರಿತು ಜಿಲ್ಲಾ ಚುನಾವಣಾಧಿಕಾರಿ ಜತೆ ಸಭೆ ನಡೆಸಿ ಅಂತಿಮ ವೋಟರ್ ಲಿಸ್ಟ್ ರಿಲೀಸ್ ಬಗ್ಗೆ ಚರ್ಚಿಸಿದ್ದಾರೆ ಹಾಗೂ ಚುನಾವಣ ಆಯೋಗದ ಮಾರ್ಗಸೂಚಿಗಳನ್ನು ಪಾಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ