ನವದೆಹಲಿ, ಜ 02 ( DaijiworldNews/MS): ಕೇಂದ್ರ ಸರ್ಕಾರದ 2016ರಲ್ಲಿ ಒಂದು ಸಾವಿರ ಮತ್ತು ಐನೂರು ಮುಖಬೆಲೆಯ ಕರೆನ್ಸಿ ನೋಟು ಅಮಾನ್ಯಗೊಳಿಸಿದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ಮೇಲೆ ಸುಪ್ರೀಂ ಕೋರ್ಟ್ ಇಂದು ಜನವರಿ 2ರಂದು ಸೋಮವಾರ ತನ್ನ ತೀರ್ಪು ಪ್ರಕಟಿಸಲಿದೆ.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎಸ್ ಎ ನಜೀರ್ ನೇತೃತ್ವದ ಐವರು ನ್ಯಾಯಾಧೀಶರ ಸಂವಿಧಾನ ಪೀಠವು ಜನವರಿ 2ರ ಇಂದು ತೀರ್ಪು ಪ್ರಕಟಿಸುವ ಸಾಧ್ಯತೆಯಿದೆ.
ಮೂಡುಬಿದಿರೆ ಮೂಲದವರಾದ ನ್ಯಾಯಮೂರ್ತಿ ಎಸ್ ಎ ನಜೀರ್ ಜನವರಿ 4ರಂದು ನಿವೃತ್ತರಾಗಲಿರುವ ಹಿನ್ನಲೆಯಲ್ಲಿ ಇಂದು ತೀರ್ಪು ಹೊರಬೀಳಬಹುದು
ಸುಪ್ರೀಂ ಕೋರ್ಟ್ನ ಸೋಮವಾರದ ಕಾರಣ ಪಟ್ಟಿಯ ಪ್ರಕಾರ, ಈ ವಿಷಯದಲ್ಲಿ ಎರಡು ಪ್ರತ್ಯೇಕ ತೀರ್ಪುಗಳು ಇರುತ್ತವೆ, ಇದನ್ನು ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಬಿ ವಿ ನಾಗರತ್ನ ಅವರು ಉಚ್ಚರಿಸುತ್ತಾರೆ. ಎರಡು ತೀರ್ಪುಗಳು ಒಪ್ಪುತ್ತವೆಯೇ ಅಥವಾ ಭಿನ್ನಾಭಿಪ್ರಾಯವೇ ಎಂಬುದು ಸ್ಪಷ್ಟವಾಗಿಲ್ಲ.
2016ರಲ್ಲಿ ಸರ್ಕಾರವು ನೋಟು ಅಮಾನ್ಯೀಕರಣ ಮಾಡುವ ನಿರ್ಧಾರ ಕೈಗೊಂಡಿರುವುದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಬೇಕೆಂದು ಸುಪ್ರೀಂ ಕೋರ್ಟ್ ಡಿಸೆಂಬರ್ 7ರಂದು ಕೇಂದ್ರ ಸರ್ಕಾರ ಮತ್ತು ಆರ್ಬಿಐಗೆ ನಿರ್ದೇಶನ ನೀಡಿತ್ತು.ನೋಟು ರದ್ದತಿ ಪ್ರಶ್ನಿಸಿ ನ್ಯಾಯಲಯದಲ್ಲಿ ಒಟ್ಟು ೫೮ ಅರ್ಜಿಗಳ ಸಲ್ಲಿಕೆಯಾಗಿದ್ದವು.