ಬೆಂಗಳೂರು,ಮಾ,08 (MSP): ಬಿಜೆಪಿ ವಿರುದ್ಧ ವಾಗ್ದಾಳಿ ಮಾಡಿ, ಪುಲ್ವಾಮ ಉಗ್ರರ ದಾಳಿ ಕುರಿತು ವಿವಾದಾತ್ಮಕ ಹೇಳಿಕೆ ನೀಡಿರುವ ರಾಜ್ಯಸಭಾ ಸದಸ್ಯ ಬಿ.ಕೆ. ಹರಿಪ್ರಸಾದ್, ‘ಪುಲ್ವಾಮ ದಾಳಿ ಸಂಬಂಧ ಮೋದಿ ಹಾಗೂ ಪಾಕಿಸ್ತಾನ ನಡುವೆ ಯಾವುದಾದರೂ ಮ್ಯಾಚ್ ಫಿಕ್ಸಿಂಗ್ ಆಗಿದೆಯಾ?’ ಎಂದು ಪ್ರಶ್ನಿಸಿದ್ದಾರೆ. ಒಂದು ವೇಳೆ ಮೋದಿ ಹಾಗೂ ಇಮ್ರಾನ್ ಖಾನ್ ನಡುವೆ ಈ ಮ್ಯಾಚ್ ಫಿಕ್ಸಿಂಗ್ ನಡೆಯದೆ ಇದ್ರೆ ಪುಲ್ವಾಮ ಘಟನೆ ನಡೆಯುತ್ತಿರಲಿಲ್ಲ ಎಂದು ಬಿ.ಕೆ ಹರಿಪ್ರಸಾದ್ ಸಂಶಯಿಸಿದ್ದಾರೆ.
ಬಿಜೆಪಿ ಹಾಗೂ ಮೋದಿ ವಿರುದ್ದ ಕಿಡಿಕಾರಿರುವ ಅವರು, ‘ಪುಲ್ವಾಮ ದಾಳಿಯಲ್ಲಿ ಗುಪ್ತಚರ ಇಲಾಖೆ ವೈಫಲ್ಯ ಎದ್ದು ಕಾಣುತ್ತದೆ. ದೇಶದ ಭದ್ರತೆಯ ಬಗ್ಗೆ ಭಾಷಣ ಮಾಡುವ ಬಿಜೆಪಿಗರು ಎರಡು ಕೆ.ಜಿ ದನ ಮಾಂಸ ಇದ್ರೆ ಕಂಡುಹಿಡಿಯುತ್ತಾರೆ ಇಂತವರಿಗೆ 350 ಕೆ.ಜಿ. ಆರ್ಡಿಎಕ್ಸ್ ಪತ್ತೆ ಹಚ್ಚಲು ಆಗಿಲ್ಲ ಯಾಕೆ' ? ಎಂದು ಪ್ರಶ್ನಿಸಿದ್ದಾರೆ.