ಅಮೃತಸ, ಡಿ 23 (DaijiworldNews/HR): ಅಮೃತಸರ ಸೆಕ್ಟರ್ನಲ್ಲಿ ಶುಕ್ರವಾರ ಪಾಕಿಸ್ತಾನದ ಡ್ರೋನ್ ಅನ್ನು ಗಡಿ ಭದ್ರತಾ ಪಡೆ (ಬಿಎಸ್ಎಫ್) ಹೊಡೆದುರುಳಿಸಿದ್ದು, ಕಳ್ಳಸಾಗಣೆ ಪ್ರಯತ್ನವನ್ನು ವಿಫಲಗೊಳಿಸಿದೆ.
ಈ ಕುರಿತು ಬಿಎಸ್ಎಫ್ ವಕ್ತಾರರು ಹೇಳಿಕೆ ನೀಡಿದ್ದು, "ಶುಕ್ರವಾರ ಬೆಳಿಗ್ಗೆ ಅಮೃತಸರ ಸೆಕ್ಟರ್ನ ಪುಲ್ಮೋರಾದಲ್ಲಿ ಗಡಿ ಹೊರಠಾಣೆ ಬಳಿ ಒಳನುಗ್ಗುತ್ತಿದ್ದ ಪಾಕಿಸ್ತಾನಿ ಡ್ರೋನ್ ಅನ್ನು ಬಿಎಸ್ಎಫ್ ಸಿಬ್ಬಂದಿ ಪತ್ತೆ ಮಾಡಿದ್ದು, ಡ್ರೋನ್ ಅನ್ನು ತಕ್ಷಣವೇ ಹೊಡೆದುರುಳಿಸಲಾಯಿತು. ಅದು ತಂದಿರಬಹುದಾದ ಕಳ್ಳಮಾಲಿನ ಪತ್ತೆಗೆ ಆ ಪ್ರದೇಶದಲ್ಲಿ ಹುಡುಕಾಟ ನಡೆಯುತ್ತಿದೆ ಎಂದಿದ್ದಾರೆ.
ಇನ್ನು ಕಳೆದ ಕೆಲ ದಿನಗಳಲ್ಲಿ ಪಂಜಾಬ್ ಗಡಿಯಲ್ಲಿ ಬಿಎಸ್ಎಫ್ ಸಿಬ್ಬಂದಿ ನೆಲಸಮಗೊಳಿಸಿರುವ ಮೂರನೇ ಡ್ರೋನ್ ಇದಾಗಿದೆ ಎಂದು ವರದಿಯಾಗಿದೆ.