ನವದೆಹಲಿ,ಮಾ.07(AZM) :ಇನ್ನು ನಿಮ್ಮ ಕೈಗೆ 20 ರೂಪಾಯಿಯ ನೋಟಿನ ಬದಲು 20 ರೂಪಾಯಿಯ ನಾಣ್ಯಗಳು ಬರಲಿವೆ. ಹೌದು, ಈ ಕುರಿತು ಹಣಕಾಸು ಸಚಿವಾಲಯ ಅಧಿಕೃತ ಅಧಿಸೂಚನೆ ಹೊರಡಿಸಿದೆ.
ರೂ. 20 ಹೊಸ ನಾಣ್ಯದ ಜೊತೆ ರೂ 1 ರಿಂದ 10 ರೂಪಾಯಿಗಳ ಎಲ್ಲಾ ನಾಣ್ಯಗಳ ವಿನ್ಯಾಸವನ್ನು ಬದಲಿಸಲು ಚಿಂತಿಸಲಾಗಿದೆ ಎನ್ನಲಾಗಿದೆ. ಇಪ್ಪತ್ತು ನಾಣ್ಯಗಳು ಆಕಾರದಲ್ಲಿ ಅಷ್ಟ ಭುಜಾಕೃತಿಯದ್ದಾಗಿರುತ್ತವೆ ಎನ್ನಲಾಗಿದ್ದು. ದೃಷ್ಟಿಹೀನರು ಕೂಡ ಸುಲಭವಾಗಿ ಗುರುತಿಸಲು ಸಾಧ್ಯವಾಗಲಿದೆ ಎನ್ನಲಾಗಿದೆ.
ಇದಕ್ಕಿಂತ ಮೊದಲು ರಿಸರ್ವ್ ಬ್ಯಾಂಕ್ 20 ರೂಪಾಯಿಗಳ ನೋಟುಗಳನ್ನು ಬಿಡುಗಡೆಗೊಳಿಸಲು ನಿರ್ಧರಿಸಿತ್ತು. ಆದರೆ, ಅಂತಿಮ ಹಂತಗಳಲ್ಲಿ ಕಾಗದದ ವೆಚ್ಚವನ್ನು ನೋಡಿದ ನಂತರ, ನಾಣ್ಯಗಳನ್ನು ಮಾತ್ರ ಬಿಡುಗಡೆ ಮಾಡಲು ನಿರ್ಧರಿಸಲಾಯಿತು.
ಮಾರ್ಚ್ 2018 ರವರೆಗೆ, ಭಾರತೀಯ ಮಾರುಕಟ್ಟೆಯಲ್ಲಿ ಒಟ್ಟು ನಾಣ್ಯಗಳು 25,600 ಕೋಟಿ ರೂ.ಗಳಾಗಿದ್ದು, ಮಾರ್ಚ್ 2019 ರೊಳಗೆ 26,000 ಕೋಟಿ ರೂ.ಗೆ ಏರಿಕೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.