ಬರೇಲಿ, ಡಿ 22 (DaijiworldNews/DB): ಮಾಜಿ ಸಂಸದೆ, ನಟಿ ಜಯಪ್ರದಾ ಅವರ ವಿರುದ್ದ ಉತ್ತರ ಪ್ರದೇಶದ ರಾಮಪುರ ಜಿಲ್ಲೆಯ ನ್ಯಾಯಾಲಯವೊಂದು ಬಂಧನ ವಾರಂಟ್ ಹೊರಡಿಸಿದೆ.
ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಈ ವಾರಂಟ್ ಹೊರಡಿಸಿದ್ದು, 2019ರ ಲೋಕಸಭಾ ಚುನಾವಣೆಯ ಪ್ರಚಾರದ ವೇಳೆ ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಎರಡು ಪ್ರಕರಣಗಳಿಗೆ ಸಂಬಂಧಿಸಿದ್ದಾಗಿದೆ ಎಂದು ತಿಳಿದು ಬಂದಿದೆ.
ಮುಂದಿನ ವಿಚಾರಣೆ ಜನವರಿ 9ರಂದು ನಡೆಯಲಿದೆ ಎಂದು ಸರ್ಕಾರಿ ವಕೀಲ ಅಮರನಾಥ್ ತಿವಾರಿ ಹೇಳಿದ್ದಾರೆ.