ಮುಂಬೈ, ಡಿ 21 ( DaijiworldNews/MS): ಸದಾ ಕನಿಷ್ಠ ಬಟ್ಟೆ ತೊಟ್ಟು ಸಖತ್ ಹಾಟ್ ಆಗಿ ಕಾಣಿಸಿಕೊಳ್ಳುವ ನಟಿ ಉರ್ಫಿ ಜಾವೇದ್ ಅವರನ್ನು ದುಬೈನಲ್ಲಿ ಬಂಧಿಸಲಾಗಿದೆ ಎಂದು ವರದಿಯಾಗಿದೆ.
ಇತ್ತೀಚೆಗಷ್ಟೇ ದುಬೈಗೆ ಭೇಟಿ ನೀಡಿರುವ ಉರ್ಫಿ, ಅಲ್ಲಿಯೂ ಅರೆಬರೆ ಮೈಮಾಟ ಪ್ರದರ್ಶಿಸುತ್ತಾ ವಿಡಿಯೋ ಶೂಟ್ ಮಾಡುತ್ತಿದ್ದ ವೇಳೆ ಉರ್ಫಿ ತೊಂದರೆಗೆ ಸಿಲುಕಿದ್ದಾರೆ ಎಂದು ವರದಿಯಾಗಿದೆ.
ಸಾರ್ವಜನಿಕ ಪ್ರದೇಶದಲ್ಲಿ ಅಶ್ಲೀಲತೆಗೆ ಆಸ್ಪದವಿಲ್ಲದ ದುಬೈನಲ್ಲಿ, ಅರೆಬೆತ್ತಲೆ ದೇಶ ಪ್ರದರ್ಶನ ಮಾಡಿರುವುದು ಆಕೆಯ ಬಂಧನಕ್ಕೆ ಕಾರಣವಾಗಿದೆ ಎಂದು ವರದಿಯಾಗಿದೆ.
ಮಂಗಳವಾರದಂದು ಫ್ಯಾಶನ್ ಇನ್ಫ್ಲುಯೆನ್ಸರ್ ಉರ್ಫಿ ಅವರನ್ನು ದುಬೈ ಅಧಿಕಾರಿಗಳಿಂದ ಬಂಧಿಸಿದ್ದಾರೆಂದು ಇಂಡಿಯಾ ಟುಡೆ ವರದಿ ಮಾಡಿದೆ. ಆದರೆ, ಈ ಸುದ್ದಿಯ ಬಗ್ಗೆ ಉರ್ಫಿ ಆಪ್ತ ಮೂಲಗಳಾಗಲಿ ಖಚಿತ ಮಾಹಿತಿ ನೀಡಿಲ್ಲ. ಮಾಧ್ಯಮಗಳಲ್ಲಿ ಮಾತ್ರ ಬಂಧನದ ಸುದ್ದಿ ವರದಿಯಾಗಿವೆ.