ಮಂಗಳೂರು, ಡಿ 21 ( DaijiworldNews/MS): ಕೇಂದ್ರ ಸರ್ಕಾರವು ರಾಜ್ಯಗಳಿಗೆ ನೀಡಬೇಕಾಗಿರುವ 17,176 ಕೋಟಿ ರೂ.ವನ್ನು ಬಾಕಿ ಉಳಿಸಿಕೊಂಡಿದೆ ಎಂದು ಹಣಕಾಸು ರಾಜ್ಯ ಸಚಿವ ಪಂಕಜ್ ಚೌಧರಿ ತಿಳಿಸಿದ್ದಾರೆ.
ರಾಜ್ಯಸಭೆಯಲ್ಲಿ ಮಾತನಾಡಿ, ರಾಜ್ಯಗಳಿಗೆ ಜಿಎಸ್ಟಿ ಪರಿಹಾರ ಪಾವತಿಯನ್ನು ಜೂನ್ನಲ್ಲೇ ನಿಲ್ಲಿಸಿದ್ದು, ಈ ಬಾಕಿ ಮೊತ್ತವು ಕಳೆದ ಜೂನ್ ತಿಂಗಳಿಗೆ ಸಂಬಂಧಿಸಿದ್ದು. ಸಂವಿಧಾನದ ನಿಬಂಧನೆ ಪ್ರಕಾರ ೫ ವರ್ಷ ರಾಜ್ಯಗಳಿಗೆ ಜಿಎಸ್ಟಿ ಪಾವತಿಸಲು ಕೇಂದ್ರ ಬದ್ಧವಾಗಿದ್ದು, ಈ ಅವಧಿಯು ಜೂನ್ ೩೦ಕ್ಕೆ ಕೊನೆಗೊಂಡಿದೆ. ಹೀಗಾಗಿ, ಜೂನ್ವರೆಗಿನ ಎಲ್ಲ ಬಾಕಿಯನ್ನು ಪಾವತಿಸಲಾಗಿದೆ ಎಂದು ತಿಳಿಸಿದರು.
ಜೂನ್ ಅಂತ್ಯದಲ್ಲಿ ಚಂಡೀಗಢದಲ್ಲಿ ನಡೆದ ಜಿಎಸ್ಟಿ ಸಮಿತಿಯ 47ನೇ ಸಭೆಯಲ್ಲಿ, ಕೊರೊನಾ ಸಾಂಕ್ರಾಮಿಕ ರೋಗದಿಂದ ತಮ್ಮ ಆದಾಯದ ಮೇಲೆ ಹೊಡೆತ ಬಿದ್ದಿರುವ ಕಾರಣದಿಂದಾಗಿ ಕನಿಷ್ಠ ಒಂದೆರಡು ವರ್ಷಗಳವರೆಗೆ ಪರಿಹಾರ ಮುಂದುವರಿಸಲು ರಾಜ್ಯಗಳು ಕೇಳಿದ್ದವು. ಆದರೆ ಜೂನ್ ತನಕ ಪರಿಹಾರ ನೀಡುತ್ತೇವೆಯೇ ಹೊರತು ಆ ಬಳಿಕ ಮುಂದುವರಿಸುವುದಿಲ್ಲ ್ಎಂಬ ನಿಲುವಿನಲ್ಲಿ ಕೇಂದ್ರ ಅಚಲವಾಗಿತ್ತು.