ನವದೆಹಲಿ, ಡಿ 19 (DaijiworldNews/DB): ಮೇಘಾಲಯ ವಿಧಾನಸಭಾ ಚುನಾವಣೆಗೆ ವರ್ಷ ಬಾಕಿ ಇರುವಂತೆಯೇ ಕಾಂಗ್ರೆಸ್ನಲ್ಲಿ ಪಕ್ಷಾಂತರ ಪರ್ವ ಆರಂಭವಾಗಿದೆ. ಮಾಜಿ ಸಚಿವೆಯೊಬ್ಬರು ಪಕ್ಷ ತೊರೆದಿದ್ದಾರೆ.
ಮೇಘಾಲಯ ರಾಜ್ಯ ಮಾಜಿ ಸಚಿವೆ ಡಾ. ಎಂಪಿರೀನ್ ಲಿಂಗ್ಡೋ ಅವರೇ ಪಕ್ಷ ತೊರೆದವರು. ಮೂಲಗಳ ಪ್ರಕಾರ ಅವರು ಬಿಜೆಪಿ ಮೈತ್ರಿ ಪಕ್ಷವಾಗಿರುವ ಎನ್ಪಿಪಿ (ನ್ಯಾಷನಲ್ ಪೀಪಲ್ಸ್ ಪಾರ್ಟಿ ಸೇರಲಿದ್ದಾರೆ ಎಂದು ಹೇಳಲಾಗಿದೆ.
ಕಾಂಗ್ರೆಸ್ಗೆ ಅಧಿಕೃತವಾಗಿ ರಾಜೀನಾಮೆ ನೀಡಿದ್ದೇನೆ ಎಂದು ಎಂಪಿರೀನ್ ಅವರು ಟ್ವೀಟ್ ಮಾಡಿದ್ದು, ಈ ಪೋಸ್ಟ್ನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ವರಿಷ್ಠರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿಯವರಿಗೆ ಟ್ಯಾಗ್ ಮಾಡಿದ್ದಾರೆ. ಇದೇ ವೇಳೆ ರಾಜೀನಾಮೆ ಪತ್ರದ ಪ್ರತಿಯನ್ನೂ ಪೋಸ್ಟ್ ಮಾಡಿದ್ದಾರೆ.
ಜೀವನದ ಮುಕ್ಕಾಲು ಭಾಗ ಕಾಂಗ್ರೆಸ್ಗಾಗಿಯೇ ದುಡಿದಿದ್ದೇನೆ. ಆದರೆ ಇತ್ತೀಚಿನ ಬೆಳವಣಿಗೆ ಪಕ್ಷದಲ್ಲಿ ಆಶಾದಾಯಕವಾಗಿಲ್ಲ. ಪಕ್ಷದಲ್ಲಿ ವ್ಯವಸ್ಥೆ ಸರಿಯಿಲ್ಲ. ಈ ಬಗ್ಗೆ ವರಿಷ್ಠರು ಗಂಭೀರವಾಗಿ ಚಿಂತಿಸಬೇಕಾದ ಅವಶ್ಯವಿದೆ ಎಂದು ಇದೇ ವೇಳೆ ಅವರು ತಿಳಿಸಿದ್ದಾರೆ.
ರಾಜ್ಯದ ಜನತೆಯೊಂದಿಗೆ ಪಕ್ಷ ಸಂಪರ್ಕವನ್ನೇ ಸಾಧಿಸುತ್ತಿಲ್ಲ.ಪಕ್ಷದಲ್ಲಿದ್ದು ಬೆಳವಣಿಗೆ ನಿರೀಕ್ಷಿಸುವುದು ಅಸಾಧ್ಯ. ಅಂತಹ ಪರಿಸ್ಥಿತಿ ಆಂತರಿಕವಾಗಿ ಇದೆ ಎಂದಿದ್ದಾರೆ.