ನವದೆಹಲಿ,ಮಾ 06(MSP): ಬಾಲಾಕೋಟ್ ದಾಳಿಯ ಬಗ್ಗೆ ವಿರೋಧ ಪಕ್ಷಗಳ ಆರೋಪಕ್ಕೆ ತಿರುಗೇಟು ನೀಡಿರುವ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಲಿನ ಮರಗಿಡಗಳು 300 ಮೊಬೈಲ್ ಫೋನ್ ಬಳಸುತ್ತಿತ್ತೆ ? ಎಂದು ವಾಯುದಾಳಿಯ ಸತ್ಯಾಸತ್ಯತೆಯನ್ನು ಪ್ರಶ್ನಿಸಿದವರಿಗೆ ಖಡಕ್ ಉತ್ತರ ನೀಡಿದ್ದಾರೆ.
ಪಾಕ್ ಆಕ್ರಮಿತ ಕಾಶ್ಮೀರ ಬಾಲಾಕೋಟ್ ನಲ್ಲಿ ಫೆಬ್ರವರಿ 26ರಂದು ಭಾರತ ವಾಯುಸೇನೆ ನಡೆಸಿದ್ದ ವಾಯುದಾಳಿಯಲ್ಲಿ ಭಾರತದ ಯುದ್ಧವಿಮಾನಗಳು, ’ಬಾಲಾಕೋಟ್ ನಲ್ಲಿ ಮರಗಿಡಗಳನ್ನು ಉರುಳಿಸಿ ಹಿಂತಿರುಗಿದೆ.ಈ ದಾಳಿಯಲ್ಲಿ ಯಾವೊಬ್ಬ ಉಗ್ರರು ಸತ್ತಿಲ್ಲ ಎಂದು ಕಾಂಗ್ರೆಸ್ ಮುಖಂಡರ ಆರೋಪಕ್ಕೆ ಕೇಂದ್ರ ಗೃಹ ಸಚಿವ ಈ ರೀತಿಯಾಗಿ ಉತ್ತರಿಸಿದ್ದಾರೆ. ವಾಯುಪಡೆ ದಾಳಿ ನಡೆಸುವ ಮುನ್ನ ಅಲ್ಲಿ 300 ಮೊಬೈಲ್ ಪೋನ್ ಗಳು ಬಳಕೆಯಲ್ಲಿದ್ದವು. ಇವೆಲ್ಲವನ್ನು ಬಳಸುತ್ತಿದ್ದದ್ದು ಮರಗಿಡಗಳೇ ಎಂದು ಟೀಕಾಕಾರರನ್ನು ಪ್ರಶ್ನಿಸಿದ್ದಾರೆ.
ಬಾಲಾಕೋಟ್ ನಲ್ಲಿ ದಾಳಿಗೆ ಮುನ್ನ 300 ಮೊಬೈಲ್ ಪೋನ್ ಗಳು ಕಾರ್ಯ ನಿರತವಾಗಿತ್ತು ಎನ್ನುವುದನ್ನು ನ್ಯಾಷನಲ್ ಟೆಕ್ನಿಕಲ್ ರೀಸರ್ಚ್ ಆರ್ಗನೈಜೇಷನ್ -ಎನ್ಟಿಆರ್ಒ ಸೇನೆಗೆ ಮಾಹಿತಿ ನೀಡಿತ್ತು. ಇದರ ಹಾಗೂ ಇತರ ಮಾಹಿತಿಗಳ ಮೇಲೆ ನಿಖರ ದಾಳಿ ನಡೆಸಲಾಗಿದೆ ಹತ್ಯೆಗೀಡಾದ ಉಗ್ರರ ಸಂಖ್ಯೆ ಎಂದಾದರೊಂದು ದಿನ ಬೆಳಕಿಗೆ ಬರಲಿದೆ ಎಂದು ಗೃಹ ಸಚಿವ ತಿರುಗೇಟು ನೀಡಿದ್ದಾರೆ.