ಮುಂಬೈ, ಡಿ.13 (DaijiworldNews/HR): ವೇದಿಕೆಯಲ್ಲಿ ಮದುವೆ ಕಾರ್ಯಕ್ರಮ ಒಂದೆಡೆ ನಡೆಯುತ್ತಿದ್ದು, ಮತ್ತೊಂದು ಕಡೆ ಬಂಧು ಮಿತ್ರರ ನಡುವೆ ಗಲಾಟೆಯಾಗುತ್ತಿದೆ. ಮದುವೆ ಮಂಟಪದಲ್ಲಿ ಬಂಧುಗಳ ನಡುವೆ ಕೈ-ಕೈ ಮಿಲಾಯಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಇನ್ಸ್ಟಾಗ್ರಾಂನಲ್ಲಿ ಆರ್ ಕೆ ರಾಜ್ ಎಂಬವರು ಈ ವಿಡಿಯೋವನ್ನು ಹಂಚಿಕೊಂಡಿದ್ದು, ವಿಡಿಯೋದಲ್ಲಿ ವೇದಿಕೆಯಲ್ಲಿ ವಧು ವರರು ನಿಂತಿರುವುದನ್ನು ಕಾಣಬಹುದು. ಇದೇ ವೇಳೆ ವೇದಿಕೆಯ ಕೆಳಗೆ ಜನಸಂದಣಿಯಲ್ಲಿ ಸಾಂಪ್ರದಾಯಿಕ ಉಡುಗೆ ತೊಟ್ಟ ಗುಂಪೊಂದು ಹೊಡೆದಾಟದಲ್ಲಿ ತೊಡಗಿರುವುದನ್ನು ಕಾಣಬಹುದು. ಈ ಅತಿಥಿಗಳು ದೈಹಿಕವಾಗಿ ನೂಕಾಟ- ತಳ್ಳಾಟಗಳಲ್ಲಿ ತೊಡಗಿರುವುದನ್ನು ಕಾಣಬಹುದು.
ಇನ್ನು ಈ ಗಲಾಟೆ ಮದುವೆ ಎಲ್ಲಿ ನಡೆದಿದೆ ಎನ್ನುವುದು ಇನ್ನೂ ಖಚಿತವಾಗಿಲ್ಲ. ಆದರೆ ಈ ವಿಡಿಯೋ ಮಾತ್ರ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.