ಬೆಂಗಳೂರು, ಡಿ12 ( DaijiworldNews/MS): ಬಾಲಾಪರಾಧವನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಮಹತ್ವದ ಹೆಜ್ಜೆ ಇರಿಸಿದ್ದು, ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆಗೆ ಬಾಲಾಪರಾಧಿ ಪೊಲೀಸ್ ಘಟಕ ಸ್ಥಾಪಿಸಲು ತೀರ್ಮಾನಿಸಿದೆ.
ಸಾಂದರ್ಭಿಕ ಚಿತ್ರ
ಅದರಂತೆ ಎಲ್ಲ ಜಿಲ್ಲೆಗಳಲ್ಲಿಯೂ ಪೊಲೀಸ್ ಘಟಕದ ಜತೆಗೆ ಪ್ರತಿ ಠಾಣೆಯಲ್ಲಿಯೂ ಒಬ್ಬರು ಆರಕ್ಷಕರನ್ನು ನೇಮಿಸಲಿದ್ದು, ಆ ಮೂಲಕ ಮಕ್ಕಳ ಸ್ನೇಹಿ ವಾತಾವರಣ ನಿರ್ಮಿಸಲಾಗುವುದು. ಇಲ್ಲಿ ಅಡ್ಡದಾರಿ ಹಿಡಿಯುವ ಮಕ್ಕಳ ಮನಪರಿವರ್ತನೆ ಕಾರ್ಯವೂ ನಡೆಯಲಿದೆ.
ಬಾಲಾಪರಾಧಿಕ ಪೊಲೀಸ್ ಘಟಕ ಗಳಿರುವ ಠಾಣೆಗಳಲ್ಲಿ ಎಲ್ಲ ಮಕ್ಕಳ ಕಲ್ಯಾಣ ಪೊಲೀಸ್ ಅಧಿಕಾರಿಗಳ ಸಂಪರ್ಕ ಸಂಖ್ಯೆ ಪ್ರದರ್ಶನ , ಮಕ್ಕಳ ಪ್ರಕರಣ ನಿರ್ವಹಿಸಲು ಪ್ರತ್ಯೇಕ ಅಧಿಕಾರಿಗಳಿರಬೇಕು. ಕೊಠಡಿ , ಶುದ್ದ ಕುಡಿಯುವ ನೀರಿನ ವ್ಯವಸ್ಥೆ, ಆಟದ ಅಂಗಳ, ಪ್ರತ್ಯೇಕ ಶೌಚ ಗೃಹ ಇದ್ದು ಹೆಣ್ಣು ಮಕ್ಕಳಿದ್ದರೆ ಅವರನ್ನು ಮಹಿಳಾ ಅಧಿಕಾರಿಯೇ ಮಾತನಾಡಿಸಬೇಕು ಎಂಬ ನಿಯಮವಿದೆ.