ನವದೆಹಲಿ,ಮಾ.5(AZM):ನಿಮ್ಮ ಬ್ಯಾಂಕ್ ಅಕೌಂಟ್ ಗೆ ಪ್ಯಾನ್ ಲಿಂಕ್ ಇಲ್ಲ ಅಂದ್ರೆ ಬೇಗನೇ ಮಾಡ್ಕೊಳ್ಳಿ. ಯಾಕೆ ಅಂದರೆ ಬ್ಯಾಂಕ್ ಅಂಕೌಟ್ ಗೆ ಪ್ಯಾನ್ ಲಿಂಕ್ ಮಾಡುವುದರಿಂದ ನಿಮ್ಮ ಆದಾಯ ತೆರಿಗೆ ಹಣ ಮರುಪಾವತಿಯಾಗಲಿದೆ ಎಂದು ಆದಾಯ ತೆರಿಗೆ ಇಲಾಖೆ ಪ್ರಕಟಣೆ ಹೊರಡಿಸಿದೆ.
ಈ ನಿಯಮವು ಮಾರ್ಚ್ 1ರಿಂದ ಜಾರಿಗೆ ಬಂದಿದ್ದು, ಆದಾಯ ತೆರಿಗೆ ಮೊತ್ತ ಬ್ಯಾಂಕ್ ಖಾತೆಗೆ ಇ-ವರ್ಗಾವಣೆ ಮೂಲಕ ಮರುಪಾವತಿಯಾಗಲಿದೆ., ಅದಕ್ಕೆ ಪ್ಯಾನ್ ಸಂಖ್ಯೆಯನ್ನು ನೀಡಬೇಕು ಎಂದು ಇಲಾಖೆ ಹೇಳಿದೆ.
ಆದಾಯ ತೆರಿಗೆ ವಿವರ ಸಲ್ಲಿಸಲು ಪ್ಯಾನ್ ಸಂಖ್ಯೆಯನ್ನು ಆಧಾರ್ ಸಂಖ್ಯೆಯೊಂದಿಗೆ ಜೋಡಣೆ ಮಾಡಬೇಕೆಂದು ಆದಾಯ ತೆರಿಗೆ ಇಲಾಖೆ ಕಡ್ಡಾಯ ಮಾಡಿದೆ. ಹಾಗೂ ಪ್ಯಾನ್ ಸಂಖ್ಯೆಯನ್ನು ಆಧಾರ್ ಸಂಖ್ಯೆಗೆ ಮತ್ತು ಬ್ಯಾಂಕ್ ಖಾತೆ ಸಂಖ್ಯೆಯೊಂದಿಗೆ ಜೋಡಿಸಲು ಮಾ.31 ಕೊನೆಯ ದಿನಾಂಕವಾಗಿದೆ.
ಇನ್ನು ಎಸ್ಎಂಎಸ್ ಸೌಲಭ್ಯಗಳ ಮೂಲಕ ಬಳಕೆದಾರರು ಪ್ಯಾನ್ ಮತ್ತು ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡಬಹುದಾಗಿದ್ದು, ಐ ಟಿ ಇಲಾಖೆಯ ವೆಬ್ಸೈಟ್ನಲ್ಲಿ ಬಳಕೆದಾರರು 567678 ಅಥವಾ 56161 ಸಂಖ್ಯೆಗೆ ಎಸ್ಎಂಎಸ್ ಕಳುಹಿಸಬಹುದು. ಎಸ್ಎಂಎಸ್ UIDPAN <12-digit Aadhaar> <10-digit PAN> ರೂಪದಲ್ಲಿರಬೇಕು.