ಹುಬ್ಬಳ್ಳಿ,ಮಾ 05(MSP): ಸೋಮವಾರ ತಾನೆ ಶಾಸಕ ಸ್ಥಾನಕ್ಕೆ ’ರಾಜೀನಾಮೆ ’ ಸಲ್ಲಿಸಿದ ಚಿಂಚೋಳಿ ಶಾಸಕ ಉಮೇಶ್ ಜಾಧವ್ ಅವರ ರಾಜೀನಾಮೆ ಅಂಗೀಕಾರವಾಗದು ಎಂದು ಮಾಜಿ ಸಿಎಂ, ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದ್ದಾರೆ.
ಅವರು ಹುಬ್ಬಳಿಯಲ್ಲಿ ಮಾ.5 ರ ಮಂಗಳವಾರ ಮಾತನಾಡಿ, ನಾವು ಈ ಹಿಂದೆ ಉಮೇಶ್ ಜಾಧವ್ ಸೇರಿ ಇತರ ನಾಲ್ವರು ಶಾಸಕರನ್ನು ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹಗೊಳಿಸುವಂತೆ ಸ್ಪೀಕರ್ ನೀಡಿದ್ದೇವೆ. ಅನರ್ಹತೆಗೆ ಸಲ್ಲಿಸಿರುವ ಅರ್ಜಿಯೂ ಇನ್ನೂ ಇತ್ಯರ್ಥವಾಗದ ಕಾರಣ ಉಮೇಶ್ ಜಾದವ್ ಅವರ ರಾಜೀನಾಮೆಯನ್ನು ಅಂಗೀಕರಿಸಿಲು ಸಾಧ್ಯವಿಲ್ಲ. ಆದ್ರೆ ಈ ವಿಚಾರಗಳೆಲ್ಲಾ ಸ್ಪೀಕರ್ ಕೈಯಲ್ಲಿರುವ ಕಾರಣ ಇದು ಅವರ ವಿವೇಚನೆಗೆ ಬಿಟ್ಟದ್ದು ಎಂದು ಹೇಳಿದರು.
ಚಿಂಚೋಳಿ ಶಾಸಕ ಉಮೆಶ್ ಜಾಧವ್ ಬಿಜೆಪಿಯ ಆಪರೇಷನ್ ಕಮಲದ ಖೆಡ್ಡಾಕ್ಕೆ ಬಿದ್ದಿದ್ದಾರೆ. ಬಿಜೆಪಿ ನಡೆಸಿದ 30 ಕೋಟಿ ಕುದುರೆ ವ್ಯಾಪಾರದ ಆಸೆ-ಅಮಿಷಗಳಿಗೆ ಉಮೇಶ್ ಜಾಧವ್ ಬಲಿಯಾಗಿದ್ದಾರೆ.