ನವದೆಹಲಿ,ಮಾ 04(MSP): ಪೂರ್ವಯೋಜಿತವಾದ ಗುರಿಗಳ ಮೇಲೆ ದಾಳಿ ನಡೆಸೋದು ನಮ್ಮ ಕೆಲಸ. ಅದು ಬಿಟ್ಟು ಶವಗಳನ್ನು ಎಣಿಸುತ್ತಾ ಕೂರುವುದಲ್ಲ ಎಂದು ಏರ್ ಚೀಫ್ ಮಾರ್ಷಲ್ ಬಿ.ಎಸ್ ಧನೋವಾ ಖಡಕ್’ಕ್ಕಾಗಿ ಹೇಳಿದ್ದಾರೆ.
ವಾಯುಸೇನೆ ದಾಳಿಯ ವಿಚಾರದ ವಿವಾದಗಳಿಗೆ ಸಂಬಂಧಿಸಿದಂತೆ ಮಾ. 4 ರಂದು ಪತ್ರಿಕಾಗೋಷ್ಟಿ ನಡೆಸಿದ ಅವರು, ನಾವು ವಾಯುದಾಳಿ ನಡೆಸಿದ ಬಗ್ಗೆ ಸಾಕಷ್ಟು ವದಂತಿಗಳು ಹರಿದಾಡುತ್ತಿದೆ. ನಮ್ಮ ವಾಯುಸೇನೆ ಸಾಮರ್ಥ್ಯದ ಮೇಲೆ ಯಾವುದೇ ಸಂಶಯ ಬೇಡ. ಎಂತಹ ಪರಿಸ್ಥಿತಿಯಾದರೂ ನಾವು ಸದಾ ಸನ್ನದ್ಧ ಸ್ಥಿತಿಯಲ್ಲಿರುತ್ತೇವೆ ಎಂದು ಸ್ಪಷ್ಟಪಡಿಸಿದರು.
ಆ ಬಳಿಕ ಉಗ್ರರ ನೆಲೆಗಳ ಮೇಲಿನ ದಾಳಿ ಕುರಿತು ಮಾತನಾಡಿದ ಧನೋವಾ ಅವರು, ನಾವು ಯೋಜನೆ ಸಿದ್ದಪಡಿಸಿಕೊಂಡಂತೆ ನಾವಿಟ್ಟ ಗುರಿಗಳ ಮೇಲೆ ನಿಖರವಾರಿ ದಾಳಿ ಮಾಡಿದ್ದೇವೆ. ಆದರೆ ಅಲ್ಲಿ ಉಂಟಾಗಿರುವ ಸಾವು ನೋವುಗಳ ಬಗ್ಗೆ ಲೆಕ್ಕ ಮಾಡುವುದು ನಮ್ಮ ಕೆಲಸವಲ್ಲ. ಅದೇನಿದ್ದರೂ ಸಂಬಂಧಪಟ್ಟ ಸರ್ಕಾರದ ಕೆಲಸ. ಈ ಬಗ್ಗೆ ಸ್ಪಷ್ಟನೆ ನೀಡುವ ಜವಬ್ದಾರಿಯೂ ನಮಗೆ ಸಂಬಂಧಪಟ್ಟದಲ್ಲ. ಅದನ್ನು ಅಲ್ಲಿನ ಸರ್ಕಾರ ಮಾಡಬೇಕು ಎಂದು ಗಂಭೀರವಾಗಿ ಪ್ರತಿಕ್ರಿಯಿಸಿದ್ದಾರೆ.
ನಮ್ಮ ದಾಳಿ ಬಗ್ಗೆ ಒಂದಷ್ಟು ಅನುಮಾನಗಳು ಎದ್ದಿವೆ. ನಮ್ಮ ಬಾಂಬ್ ದಾಳಿ ಅರಣ್ಯದ ಖಾಲಿ ಪ್ರದೇಶದ ಮೇಲೆ ಮಾತ್ರ ಇದ್ದರೆ ಅವರು ಯಾಕೆ ಅಷ್ಟೊಂದು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಅವರೂ ನಮ್ಮ ವಾಯುನೆಲೆಯನ್ನು ದಾಟಿ ಬರುವ ಪ್ರಯತ್ನವೇಕೆ ಮಾಡಿದ್ದು ಎಂದು ಪ್ರಶ್ನಿಸಿದರು.