ಹಾಸನ,ಮಾ.03(AZM):ನಕಲಿ ಎಟಿಎಂ ಕಾರ್ಡ್ ಬಳಸಿ ವೈದ್ಯರೊಬ್ಬರ ಲಕ್ಷಾಂತರ ರೂಪಾಯಿ ದುಷ್ಕರ್ಮಿಗಳು ದೋಚಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ನಡೆದಿದೆ.
ಡಾ.ವಸೀಂ ಅಹಮ್ಮದ್ ಷರೀಫ್ ಎಂಬುವವರ ಎಟಿಎಂ ನಲ್ಲಿರುವ ಹಣ ದೋಚಲಾಗಿದ್ದು, ಇವರು ಕಳೆದ ಮೂರು ತಿಂಗಳ ಹಿಂದೆಯಷ್ಟೆ ಎಸ್.ಬಿ.ಐ. ಬ್ಯಾಂಕ್ನ ಎಟಿಎಂ ಕಾರ್ಡ್ ಹೊಂದಿದ್ದರು. ಆದರೆ ಅವರು ಈವರೆಗೂ ಯಾವುದೇ ಆನ್ಲೈನ್ ವ್ಯವಹಾರ ಮಾಡಿಲ್ಲ ಎನ್ನಲಾಗಿದ್ದು, ಅವರ ಉಳಿತಾಯ ಖಾತೆಯಿಂದ ಯಾರೋ ದುಷ್ಕರ್ಮಿಗಳು ನಕಲಿ ಎಟಿಎಂ ಕಾರ್ಡ್ ಬಳಸಿ 1 ಲಕ್ಷ ರೂ. ತೆಗೆದಿದ್ದು, ಮತ್ತೆ 15 ನಿಮಿಷಗಳ ನಂತರ 1 ಲಕ್ಷ ರೂ. ತೆಗೆದಿದ್ದಾರೆ ಎಂದು ದೂರಿನಲ್ಲಿ ದಾಖಲಿಸಲಾಗಿದೆ.
ಹಾಸನದ ಸೈಬರ್ ಕ್ರೈಂ ಬ್ರಾಂಚ್ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.