ವಿಜಯಪುರ, ಮಾ 03(SM): ಬಿಎಲ್ಡಿಈ ಸಂಸ್ಥೆಯ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಪಾಕಿಸ್ತಾನದ ಪ್ರಧಾನಿ ಪರ ಫೇಸ್ಬುಕ್ ಪೋಸ್ಟ್ ಮಾಡಿರುವ ವಿಚಾರ ಇದೀಗ ಪರ ವಿರೋಧ ಚರ್ಚೆಗೆ ಗ್ರಾಸವಾಗುತ್ತಿದೆ. ಈ ನಡುವೆಯೇ ರಾಜ್ಯದ ಗೃಹ ಸಚಿವರು, ಪ್ರಾಧ್ಯಾಪಕನ ಪರ ವಹಿಸಿ ಮಾತನಾಡಿದ್ದಾರೆ ಎನ್ನಲಾಗಿದೆ.
ಪ್ರಾಧ್ಯಾಪಕ ಪಾಕಿಸ್ತಾನದ ಪರವಾಗಲಿ, ಅಲ್ಲಿನ ಪ್ರಧಾನಿಗಳ ಪರವಾಗಿ ಪೋಸ್ಟ್ ಮಾಡಿಲ್ಲ. ಯುದ್ಧವಾದರೆ ಎರಡೂ ದೇಶದ ಜನರಿಗೂ, ಎರಡೂ ದೇಶಕ್ಕೂ ಹಾನಿಯಾಗುತ್ತದೆ ಎಂದು ಪೋಸ್ಟ್ ಮಾಡಿದ್ದಾರೆ. ಇದನ್ನೇ ಕೆಲವರು ಬಂಡವಾಳಾವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂಬುವುದಾಗಿ ಗೃಹ ಸಚಿವ ಎಂ.ಬಿ.ಪಾಟೀಲ ಪ್ರಾಧ್ಯಾಪಕರ ಪರ ಬ್ಯಾಟ್ ಬೀಸಿದ್ದಾರೆ.
ಪೋಸ್ಟ್ ವಿಚಾರವಾಗಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿ ಕಾನೂನು ಚೌಕಟ್ಟಿನೊಳಗೆ ಹೋರಾಡಬೇಕೇ ಹೊರತು ನೈತಿಕ ಪೊಲೀಸ್ ಗಿರಿ ನಡೆಸಬಾರದು ಎಂದು ಇದೇ ವೇಳೆ ಗೃಹ ಸಚಿವ ಪಾಟೀಲ್ ತಿಳಿಸಿದ್ದಾರೆ.
ದೇಶದ ವಿರುದ್ಧ ಹಾಗೂ ಸೈನಿಕರ ವಿರುದ್ಧ ಯಾರಿಗೂ ಮಾತನಾಡುವ ಅಧಿಕಾರವಿಲ್ಲ. ಹಾಗೊಂದು ವೇಳೆ ಮಾಡಿದ್ದೇ ಆದಲ್ಲಿ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರಗಿಸಲಾಗುವುದಾಗಿ ಗೃಹ ಸಚಿವರು ತಿಳಿಸಿದ್ದಾರೆ.