ಬೆಂಗಳೂರು, ಡಿ 09 ( DaijiworldNews/MS): ಕರ್ನಾಟಕ ರಾಜ್ಯ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ದೇವಾಲಯಗಳಲ್ಲಿ ರೂಢಿಯಾಗಿ ಬಂದಿರುವ ದೀವಟಿಗೆ ಸಲಾಂ, ಸಲಾಂ ಆರತಿ ಮತ್ತು ಸಲಾಂ ಮಂಗಳಾರತಿ ರಾಜ್ಯ ಸರ್ಕಾರ ಬ್ರೇಕ್ ಹಾಕಿದೆ.
ಈ ಸಂಬಂಧ ಧಾರ್ಮಿಕ ಪರಿಷತ್ ನಿಂದ ಆದೇಶ ಹೊರಡಿಸಲಾಗಿದ್ದು, ಮಂಡ್ಯ ಜಿಲ್ಲೆಯ ಪ್ರಸಿದ್ಧ ಚಲುವನಾರಾಯಣಸ್ವಾಮಿ, ಕುಕ್ಕೆ ಸುಬ್ರಹ್ಮಣ್ಯ, ಕೊಲ್ಲೂರು, ಪುತ್ತೂರಿನ ಮಹಾಲಿಂಗೇಶ್ವರ ಸೇರಿ ಹಲವು ದೇವಾಲಯದಲ್ಲಿ ಪ್ರಾಚೀನ ಕಾಲದಿಂದಲೂ ಆಚರಿಸಿಕೊಂಡು ಬಂದಿರುವಂತ ಸಂಧ್ಯಾ ಕಾಲದ ದೀವಟಿಗೆ ಸಲಾಂ ಬದಲಾಗಿ ಅದರ ಹೆಸರನ್ನು ಬದಲಾಯಿಸಿ ಸಂಪ್ರದಾಯದಂತೆ ನಡೆದುಕೊಂಡು ಬಂದಿರುವ ಪದ್ಧತಿಗಳನ್ನು ಅನುಸರಿಸುವ ಸಲುವಾಗಿ ‘ನಮಸ್ಕಾರ’ ಎಂಬ ಪದವನ್ನು ಮಾತ್ರ ಬಳಸಿಕೊಂಡು ದೀವಟಿಗೆ, ಆರತಿ, ಮಂಗಳಾರತಿ ಸೇವೆ ಮಾಡುವಂತೆ ಧಾರ್ಮಿಕ ಪರಿಷತ್ತು ಸುತ್ತೋಲೆ ಹೊರಡಿಸಿರುವುದಾಗಿ ತಿಳಿದು ಬಂದಿದೆ
ಇದೀಗ ದೇವಳದಲ್ಲಿ ಬಳಕೆಯಲ್ಲಿರುವ ‘ಸಲಾಂ’ ಶಬ್ದದ ಬದಲಿಸಿ ದೀಪ ನಮಸ್ಕಾರ, ಸಂಧ್ಯಾ ನಮಸ್ಕಾರ, ಆಯಾ ಕಡೆಗೆ ಹೊಂದುವ ರೀತಿಯಲ್ಲಿ ಮಾಡಬಹುದು ಎಂದು ಆದೇಶದಲ್ಲಿ ಹೇಳಿದೆ.ಅಂದಹಾಗೇ ದೀವಟಿಗೆ ಸಲಾಂ ಎಂಬುದು ಸಂಧ್ಯಾ ಕಾಲದಲ್ಲಿ ಮೂಲ ದೇವರಿಗೆ ನಡೆಸಲಾಗುತ್ತಿದ್ದಂತ ಆರತಿ ಸೇವೆಯಾಗಿದೆ.