ನವದೆಹಲಿ, ಡಿ 09 (DaijiworldNews/DB): ದಾಖಲೆಗಳನ್ನು ಮುರಿಯುವುದರಲ್ಲಿಯೂ ಗುಜರಾತ್ನ ಜನ ದಾಖಲೆ ಬರೆದಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ.
ಗುಜರಾತ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಗೆಲುವಿನ ಸಂಭ್ರಮದಲ್ಲಿ ನವದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, 182 ಸ್ಥಾನಗಳ ಪೈಕಿ 156 ಸ್ಥಾನಗಳನ್ನು ಬಿಜೆಪಿಗೆ ನೀಡುವ ಮೂಲಕ ಗುಜರಾತ್ನ ಜನ ಹಿಂದಿನ ದಾಖಲೆ ಮುರಿದು ಹೊಸ ದಾಖಲೆ ಸೃಷ್ಟಿಸಿದ್ದಾರೆ. ಇದು ಗುಜರಾತ್ ಇತಿಹಾಸದಲ್ಲೇ ಅತಿ ದೊಡ್ಡ ಜನಾದೇಶ ಎಂದರು.
ಜಾತಿ, ವರ್ಗ, ಸಮುದಾಯದಂತಹ ವಿಭಜನೆಗಳನ್ನು ಮೀರಿ ಬಿಜೆಪಿಯನ್ನು ಜನ ಆಶೀರ್ವದಿಸಿದ್ದಾರೆ. ಈ ಜನಬೆಂಬಲವು ನವ ಭಾರತದ ಆಶಯಗಳ ಪ್ರತಿಬಿಂಬ ಹಾಗೂ ಯುವ ಸೋಚ್ನ ದ್ಯೋತಕವಾಗಿದೆ. ಜನತಾ ಜನಾರ್ದನನ ಮುಂದೆ ನಾವು ತಲೆಭಾಗುತ್ತೇವೆ, ಅವರ ಆಶೀರ್ವಾದಕ್ಕಾಗಿ ಮೆಚ್ಚುತ್ತೇವೆ ಎಂದು ಹೇಳಿದರು.
ಬಿಜೆಪಿ ಮೇಲಿರುವ ಜನರ ಒಲವು ಉಪ ಚುನಾವಣೆಗಳಲ್ಲಿಯೂ ಗೋಚರಿಸುತ್ತಿದೆ. ಉತ್ತರಪ್ರದೇಶದ ರಾಂಪುರದಲ್ಲಿ ಪಕ್ಷ ಗೆದ್ದರೆ, ಬಿಹಾರ ಉಪಚುನಾವಣೆಯಲ್ಲಿ ಮುಂದಿನ ಸಾಧನೆಗೆ ಸಂದೇಶ ನೀಡಿದೆ. ಎಲ್ಲಾ ಸೌಲಭ್ಯಗಳನ್ನು ಬಡ, ಮಧ್ಯಮ ವರ್ಗಗಳ ಕುಟುಂಬಗಳಿಗೆ ತಲುಪಿಸಲು ಬಿಜೆಪಿ ಬದ್ದ. ದೇಶದ ಹಿತದೃಷ್ಟಿಯಿಂದ ಕಠಿಣ ನಿರ್ಧಾರಗಳನ್ನು ಕೈಗೊಳ್ಳುವ ಶಕ್ತಿ ಬಿಜೆಪಿಯಲ್ಲಿದೆ ಎಂಬುದನ್ನು ಜನ ಅರಿತುಕೊಂಡಿದ್ದಾರೆ ಎಂದು ಮೋದಿ ಪ್ರತಿಪಾದಿಸಿದರು.