ನವದೆಹಲಿ, ಡಿ 09 (DaijiworldNews/DB): ವೈವಿಧ್ಯ ರೀತಿಯಲ್ಲಿ ಮದುವೆಯಾಗಬೇಕೆಂಬುದು ಹಲವರ ಇಚ್ಚೆ. ಆದರೆ ಇಲ್ಲೊಬ್ಬ ವಧು ಮದುವೆಯಲ್ಲಿ ಕನ್ಯಾದಾನವನ್ನು ನಿರಾಕರಿಸಿದ ಪೋಸ್ಟ್ವೊಂದು ನೆಟ್ಟಿಗರ ಗಮನ ಸೆಳೆದಿದೆ.
@keepitrustic ಎಂಬವರು ತಾವು ತಮ್ಮ ಮದುವೆಯಲ್ಲಿ ಕನ್ಯಾದಾನವನ್ನು ನಿರಾಕರಿಸಿರುವ ಬಗ್ಗೆ ಮೈಕ್ರೋಬ್ಲಾಗಿಂಗ್ ಸೈಟ್ನಲ್ಲಿ ಹಂಚಿಕೊಂಡಿದ್ದಾರೆ. ಭಾರತೀಯ ವಿವಾಹ ಪದ್ದತಿಯಲ್ಲಿ ಕನ್ಯಾದಾನ ಆಚರಣೆಯಿದೆ. ವಧುವಿನ ತಂದೆ ತನ್ನ ಮಗಳ ಕೈಯನ್ನು ವರನ ಕೈಲ್ಲಿರಿಸಿದ ತನ್ನ ಸಮಾನ ಸಂಗಾತಿಯಾಗಿ ಸ್ವೀಕರಿಸಲು ವಿನಂತಿಸುವುದು ಕನ್ಯಾದಾನ. ವಧುವಿನ ತಂದೆಯು ಸ್ವೀಕಾರ ಮತ್ತು ಮಗಳನ್ನು ಬಿಟ್ಟುಕೊಡಲು ಅಧಿಕೃತ ಅನುಮೋದನೆ ನೀಡುವುದನ್ನು ಇದು ಸೂಚಿಸುತ್ತದೆ. ಆದರೆ ಈ ಪದ್ದತಿ ನನ್ನ ಮದುವೆಯಲ್ಲಿರುವುದು ನನಗೆ ಇಷ್ಟವಿರಲಿಲ್ಲ. ಹೆಣ್ಣನ್ನು ಒಂದು ಮನೆತನದಿಂದ ಇನ್ನೊಂದು ಮನೆತನಕ್ಕೆ ವರ್ಗಾಯಿಸುವ ಇಚ್ಚೆ ನನಗಿರಲಿಲ್ಲ. ಹೀಗಾಗಿ ನನ್ನ ಮದುವೆಯಲ್ಲಿ ಕನ್ಯಾದಾನ ಇರಲಿಲ್ಲ ಎಂದು ಬರೆದುಕೊಂಡಿದ್ದಾರೆ.
ಇನ್ನು ವಧುವಿನ ಧೈರ್ಯ ಮತ್ತು ಇಚ್ಚಾಶಕ್ತಿ ಬಗ್ಗೆ ನೆಟ್ಟಿಗರು ಶ್ಲಾಘಿಸಿದ್ದಾರೆ. ಸಮಾನತೆ ತರಲು ಇಂತಹ ಕ್ರಮಗಳು ತೀರಾ ಅಗತ್ಯ ಎಂದು ಹಲವರು ಪ್ರತಿಪಾದಿಸಿದ್ದಾರೆ.