ಅಹಮದಾಬಾದ್, ಡಿ 09 ( DaijiworldNews/MS): ಚುನಾವಣಾ ಫಲಿತಾಂಶದಲ್ಲಿ ಗುಜರಾತ್ ಬಿಜೆಪಿ ದೈತ್ಯ ಮುನ್ನಡೆ ಸಾಧಿಸಿತೊಡಗಿದ ಕೆಲವೇ ಗಂಟೆಗಳಲ್ಲಿ, ಕಾಂಗ್ರೆಸ್ ಪಕ್ಷ ಅಹಮದಾಬಾದ್ನಲ್ಲಿರುವ ತನ್ನ ಕೇಂದ್ರ ಕಚೇರಿಯಲ್ಲಿ ಅಳವಡಿಸಿದ್ದ 'ಪರಿವರ್ತನ್' ಗಡಿಯಾರವನ್ನು ಸ್ವಿಚ್ ಆಫ್ ಮಾಡಿದೆ.
ಗುಜರಾತ್ ನಲ್ಲಿ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಸರಕಾರ ಬದಲಾವಣೆಯ ಭರವಸೆಯೊಂದಿಗೆ, ರಾಜ್ಯದಲ್ಲಿ ಪರಿವರ್ತನೆಗೆ ಕೌಂಟ್ ಡೌನ್ ಆರಂಭವಾಗಿದೆ ಎಂಬುದರ ಸೂಚಕವಾಗಿ ಕಾಂಗ್ರೆಸ್ ಈ ಪರಿವರ್ತನೆ ಗಡಿಯಾರವನ್ನು ಅಳವಡಿಸಿತ್ತು.
ಬಿಜೆಪಿ ಸೋಲಿಗೆ "ಎಣಿಕೆ" ಮಾಡುತ್ತಿದ್ದ ಈ ಗಡಿಯಾರವು ದಿನಗಳು, ಗಂಟೆಗಳು, ನಿಮಿಷಗಳು ಮತ್ತು ಸೆಕೆಂಡುಗಳ ಸ್ಲಾಟ್ಗಳನ್ನು ಹೊಂದಿತ್ತು .
ಬಿಜೆಪಿ ಐತಿಹಾಸಿಕ ಗೆಲುವು ದಾಖಲಿಸುತ್ತಿದ್ದಂತೆಯೇ "ಪರಿವರ್ತನ್" ಗಡಿಯಾರವೂ ನಿಂತುಹೋಯಿತು. ಮತ ಎಣಿಕೆಯಲ್ಲಿ ಬಿಜೆಪಿ ಮುನ್ನಡೆ ಸಾಧಿಸುತ್ತಿದ್ದಂತೆಯೇ ಬೆಳಿಗ್ಗೆ 11.20 ರ ಸುಮಾರಿಗೆ ಕೈ ಪಕ್ಷದ ಗಡಿಯಾರ ಸ್ವಿಚ್ ಆಫ್ ಆಯಿತು.
ಗಮನಾರ್ಹವೆಂದರೆ, ಗುಜರಾತ್ನಲ್ಲಿ ಬಿಜೆಪಿಯು ತನ್ನ ಹಿಂದೆಂದೂ ಕಾಣದ ಸಾಧನೆಯತ್ತ ಮಾಡಿದ್ದು 182 ಸ್ಥಾನಗಳಲ್ಲಿ 156ರಲ್ಲಿ ಬಿಜೆಪಿ ಮುನ್ನಡೆ ಸಾಧಿಸಿವೆ. 1985ರಲ್ಲಿ ಕಾಂಗ್ರೆಸ್ನ 149 ಸೀಟುಗಳ ದಾಖಲೆಗಿಂತ ಇದು ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಸಾಧನೆ ಮಾಡಿದೆ.