ಉತ್ತರಪ್ರದೇಶ, ಡಿ 9 (DaijiworldNews/HR): ವಯಸ್ಸಾದ ಮಹಿಳೆಯೊಬ್ಬರು ತಮ್ಮ ಹೌಸಿಂಗ್ ಸೊಸೈಟಿಯ ಮಹಿಳಾ ಭದ್ರತಾ ಸಿಬ್ಬಂದಿಯನ್ನು ಥಳಿಸುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಅವರ ವಿರುದ್ಧ ದೂರು ದಾಖಲಿಸಲಾಗಿದೆ.
ವಯಸ್ಸಾದ ಮಹಿಳಾ ಭದ್ರತಾ ಸಿಬ್ಬಂದಿಯನ್ನು ದೊಣ್ಣೆಯಿಂದ ಹೊಡೆದು ಆಕೆಯನ್ನು ನಿಂದಿಸುತ್ತಿರುವುದನ್ನು ವೀಡಿಯೊದಲ್ಲಿ ತೋರಿಸಲಾಗಿದೆ.
ಸೆಕ್ಯೂರಿಟಿ ಗಾರ್ಡ್ಗಳು ಹೀಟರ್ ಬಳಸಿ ಅದರ ಸುತ್ತಲೂ ನಿಂತು ಬೆಚ್ಚಗಾವುದಕ್ಕೆ ಮಹಿಳೆ ಆಕ್ಷೇಪ ವ್ಯಕ್ತಪಡಿಸಿದಾಗ ಗಲಾಟೆ ನಡೆದಿದೆ ಎನ್ನಲಾಗಿದೆ.
ಸೆಕ್ಯೂರಿಟಿ ಗಾರ್ಡ್ ಸೋನಿ ದೇವಿಯನ್ನು ಥಳಿಸಲು ಮಹಿಳೆಯು ತನ್ನ ಕಾರಿನಿಂದ ಕೋಲನ್ನು ಹೊರತೆಗೆದುಕೊಂಡಿದ್ದು, ಆಗ ಸೆಕ್ಯೂರಿಟಿ ಗಾರ್ಡ್ ಬೆಂಬಲಕ್ಕೆ ಬಂದ ಇತರ ಕೆಲಸಗಾರರನ್ನು ಕೆಲಸದಿಂದ ತೆಗೆದುಹಾಕುವುದಾಗಿ ಬೆದರಿಕೆ ಹಾಕಿದ್ದಳೆ.
ಇನ್ನು ಸೊಸೈಟಿಯ ನಿರ್ವಹಣಾ ಕಂಪನಿಯ ಮ್ಯಾನೇಜರ್ ಇರ್ಷಾದ್ ಅಲಿ ಅವರು ಸೋನಿ ದೇವಿಯನ್ನು ಬಾದಶಹಪುರ ಪೊಲೀಸ್ ಠಾಣೆಗೆ ಕರೆದೊಯ್ದು ನಿವಾಸಿ ಮಹಿಳೆ ವಿರುದ್ಧ ದೂರು ದಾಖಲಿಸಿದ್ದಾರೆ.